ಲಂಡನ್(ಏ.26): ಕ್ರಿಕೆಟ್‌ನಲ್ಲಿ ಅಂಪೈರ್ ಪಾತ್ರ ತುಂಬಾನೇ ಮುಖ್ಯ. ಇಷ್ಟೇ ಅಲ್ಲ ಇದು ಅತ್ಯಂತ ಕಠಿಣ ಕೂಡ ಹೌದು. ಇಂತಹ ಕಠಿಣ ಸಂದರ್ಭದಲ್ಲಿ ತಪ್ಪು ನಿರ್ಧಾರ ಪ್ರಕಟಿಸದೇ ಎಲ್ಲರ ನೆಚ್ಚಿನ ಅಂಪೈರ್ ಆಗಿರುವ ಇಂಯಾನ್ ಗೌಲ್ಡ್ ನಿವೃತ್ತಿಗೆ ಸಜ್ಜಾಗಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಅಂಪೈರ್ ವೃತ್ತಿಗೆ ವಿದಾಯ ಹೇಳಲಿದ್ದಾರೆ.

ಇದನ್ನೂ ಓದಿ: ಇಲ್ಲಿದೆ ನೋಡಿ ವಿಶ್ವಕಪ್ ಟೂರ್ನಿಗೆ ರೆಡಿಯಾದ 10 ತಂಡಗಳ ಸಂಪೂರ್ಣ ಪಟ್ಟಿ

61 ವರ್ಷದ ಇಯಾನ್ ಗೌಲ್ಡ್ ಇಂಗ್ಲೆಂಡ್ ಮೂಲದವರು. 1983ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಆಗಿದ್ದ ಇಯಾನ್ ಗೌಲ್ಡ್, ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಅಂಪೈರ್ ವೃತ್ತಿ ಆರಂಭಿಸಿದರು. ಇದುವರೆಗೆ ಇಯಾನ್ ಗೌಲ್ಡ್, 74 ಟೆಸ್ಟ್, 134 ಏಕದಿನ, 37 ಅಂತಾರಾಷ್ರೀಯ ಟಿ20 ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್‌ಗೆ ಯಾವ ತಂಡ? ಭವಿಷ್ಯ ನುಡಿದ ಗಂಗೂಲಿ!

2019ರ ವಿಶ್ವಕಪ್ ಟೂರ್ನಿಗೆ ಐಸಿಸಿ 22 ಅಂಪೈರ್ ಆಯ್ಕೆ ಮಾಡಿದೆ. ಇದರಲ್ಲಿ ಇಯಾನ್ ಗೌಲ್ಡ್ ಕೂಡ ಆಯ್ಕೆಯಾಗಿದ್ದಾರೆ. ಇದೀಗ ಇಯಾನ್ ಗೌಲ್ಡ್ ವಿದಾಯದ ನಿರ್ಧಾರ  ಪ್ರಕಟಿಸಿದ ಬೆನ್ನಲ್ಲೇ, ಐಸಿಸಿ ಶುಭಕೋರಿದೆ. ಇಯಾನ್ ಗೌಲ್ಡ್ ಅಂಪೈರ್ ಹಾಗೂ ಕ್ರಿಕೆಟ್ ನೀಡಿದ ಕೊಡುಗೆಯನ್ನು ಉಲ್ಲೇಖಿಸಿದೆ.