ಲಂಡನ್‌[ಆ.14]: ಪ್ರತಿಷ್ಠಿತ ಆ್ಯಷಸ್‌ ಸರಣಿಯ ಮೊದಲ ಪಂದ್ಯದಲ್ಲಿ 251 ರನ್‌ಗಳ ಹೀನಾಯ ಸೋಲು ಕಂಡಿರುವ ಇಂಗ್ಲೆಂಡ್‌, ಬುಧವಾರದಿಂದ ಕ್ರಿಕೆಟ್‌ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳುವ 2ನೇ ಟೆಸ್ಟ್‌ ಪುಟಿದೇಳುವ ವಿಶ್ವಾಸದಲ್ಲಿದೆ. 

ಆ್ಯಷಸ್ ಸರಣಿ : 2ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ!

ಸ್ಟೀವ್‌ ಸ್ಮಿತ್‌ ಹೋರಾಟದ ಫಲದಿಂದ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಆಸ್ಪ್ರೇಲಿಯಾ, ಈ ಪಂದ್ಯವನ್ನು ಗೆದ್ದು ಸರಣಿ ಗೆಲುವಿನತ್ತ ದಾಪುಗಾಲಿರಿಸುವ ಗುರಿ ಹೊಂದಿದೆ. ಇಂಗ್ಲೆಂಡ್‌ ನೆಲದಲ್ಲಿ ಆಸ್ಪ್ರೇಲಿಯಾ ಆ್ಯಷಸ್‌ ಸರಣಿ ಗೆದ್ದು 18 ವರ್ಷಗಳಾಗಿವೆ. ಸ್ಮಿತ್‌ ಲಯ ಕಂಡುಕೊಂಡರೆ ಆಸೀಸ್‌ ಆಸೆ ಈಡೇರಲಿದೆ. ಈ ಪಂದ್ಯದಲ್ಲಿ ಮಿಚೆಲ್‌ ಸ್ಟಾರ್ಕ್ ಹಾಗೂ ಜೋಶ್‌ ಹೇಜಲ್‌ವುಡ್‌ ಕಣಕ್ಕಿಳಿಯುವ ಸಾಧ್ಯತೆ ಇದೆ. ಜೇಮ್ಸ್‌ ಆ್ಯಂಡರ್‌ಸನ್‌ ಗಾಯಗೊಂಡಿರುವ ಕಾರಣ, ಯುವ ಆಲ್ರೌಂಡರ್‌ ಜೋಫ್ರಾ ಆರ್ಚರ್‌ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ಆ್ಯಷಸ್‌ ಕದನ: ಆಸ್ಟ್ರೇಲಿಯಾ ಜಯಭೇರಿ!

ಆ್ಯಷಸ್‌ನ ಮೊದಲ ಪಂದ್ಯವನ್ನು ಸೋತ ಬಳಿಕ ಇಂಗ್ಲೆಂಡ್‌ ಎರಡೇ ಎರಡು ಬಾರಿ ಸರಣಿ ಗೆಲುವು ಸಾಧಿಸಿದೆ. ಈ ಬಾರಿ ಅಂತಹ ಸಾಧನೆಯನ್ನು ಮತ್ತೆ ಮಾಡಬೇಕಿದ್ದರೆ, ಇಂಗ್ಲೆಂಡ್‌ ಸಾಂಘಿಕ ಪ್ರದರ್ಶನ ತೋರಲೇಬೇಕಿದೆ.

ಇಂಗ್ಲೆಂಡ್‌ ತಂಡದಲ್ಲಿ ಆರ್ಚರ್‌

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಚಾಂಪಿಯನ್‌ ಆಗಲು ನೆರವಾಗಿದ್ದ ಆಲ್ರೌಂಡರ್‌ ಜೋಫ್ರಾ ಆರ್ಚರ್‌, ಆಸ್ಪ್ರೇಲಿಯಾ ವಿರುದ್ಧ ಆ್ಯಷಸ್‌ ಸರಣಿಯ 2ನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ