ಲಾರ್ಡ್ಸ್(ಆ.09): ಆಸ್ಟ್ರೇಲಿಯಾ ವಿರುದ್ಧದ ಆಶ್ಯಸ್ ಟೆಸ್ಟ್ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿರುವ ಆತಿಥೇಯ ಇಂಗ್ಲೆಂಡ್ ಇದೀಗ 2ನೇ ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಸೋಲಿಗೆ ಸೇಡು ತೀರಿಸಲು ಇಂಗ್ಲೆಂಡ್ ತಂಡ ಭರ್ಜರಿ ತಯಾರಿ ನಡೆಸಿದೆ. ಇದೀಗ 2ನೇ ಪಂದ್ಯಕ್ಕೆ 12 ಸದಸ್ಯರ ತಂಡ ಪ್ರಕಟಿಸಿದೆ. 

ಇದನ್ನೂ ಓದಿ: ಆ್ಯಷಸ್‌ ಕದನ: ಆಸ್ಟ್ರೇಲಿಯಾ ಜಯಭೇರಿ!

ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಆಲ್ರೌಂಡರ್ ಮೊಯಿನ್ ಆಲಿಗೆ ವಿಶ್ರಾಂತಿ ನೀಡಲಾಗಿದೆ. ಇಂಜುರಿಯಿಂದ ಚೇತರಿಸಿಕೊಂಡಿರುವ ಜೋಫ್ರಾ ಆರ್ಚರ್ ತಂಡ ಸೇರಿಕೊಂಡಿದ್ದಾರೆ. ಆರ್ಚರ್ ಜೊತೆಗೆ ಜ್ಯಾಕ್ ಲೀ ಕೂಡ ತಂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಆ್ಯಷಸ್ ಸರಣಿ: 2 ವರ್ಷಗಳ ಬಳಿಕ ಇಶಾಂತ್‌ ಅನುಕರಣೆ ಮಾಡಿದ ಸ್ಮಿತ್!

ಇಂಗ್ಲೆಂಡ್ ತಂಡ: ಜೂ ರೂಟ್(ನಾಯಕ),  ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋ, ಸ್ಟುವರ್ಟ್ ಬ್ರಾಡ್, ರೊರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರ್ರನ್, ಜೋ ಡೆನ್ಲಿ, ಜ್ಯಾಕ್ ಲೀಚ್, ಜಾಸನ್ ರಾಯ್, ಬೆನ್ ಸ್ಚೋಕ್ಸ್, ಕ್ರಿಸ್ ವೋಕ್ಸ್