ಕ್ರೀಡಾ ಸ್ಫೂರ್ತಿ ಮರೆತ ಇಂಗ್ಲೆಂಡ್ ಕ್ರಿಕೆಟಿಗ ಅಮಾನತು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 7:47 PM IST
England cricketer banned for acting against the spirit of the game
Highlights

ಬ್ಯಾಟ್ಸ್‌ಮನ್ ಶತಕ ತಪ್ಪಿಸಲು ಕ್ರೀಡಾ ಸ್ಫೂರ್ತಿ ಮರೆತ ಇಂಗ್ಲೆಂಡ್ ಕ್ರಿಕೆಟಿಗ ಇದೀಗ ಅಮಾನತ್ತು ಶಿಕ್ಷೆಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಅಮಾನತ್ತಿಗೆ ಕಾರಣವೇನು? ಇಲ್ಲಿದೆ ಇಂಗ್ಲೆಂಡ್ ಕ್ರಿಕೆಟಿಗ ಸ್ಟೋರಿ

ಲಂಡನ್(ಆ.08): ಕ್ರೀಡಾ ಸ್ಫೂರ್ತಿ ಮರೆತು ಎಲ್ಲರ ಕೆಂಗಣ್ಣಿಗೆ ಗುರಿಯಾದ ಇಂಗ್ಲೆಂಡ್ ಕ್ರಿಕೆಟಿಗ ಅಮಾನತ್ತಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ನಡೆದ ಇಂಗ್ಲೆಂಡ್‌ನ ಸೋಮರ್‌ಸೆಟ್  ಲೀಗ್ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್ ಶತಕ ತಪ್ಪಿಸಲು ಬೌಂಡರಿಗೆ ಬಾಲ್ ಎಸೆದ ವೇಗಿಯನ್ನ ಇದೀಗ ಅಮಾನತ್ತು ಮಾಡಲಾಗಿದೆ.

ಮೈನ್‌ಹೆಡ್ ಕ್ರಿಕೆಟ್ ತಂಡ ಬ್ಯಾಟ್ಸ್‌ಮನ್ ಜೇ ಡರೆಲ್ 98 ರನ್ ಸಿಡಿಸಿ ಕ್ರೀಸ್‌ನಲ್ಲಿದ್ದರು. ತಂಡದ ಗೆಲುವಿಗೆ 2ರನ್‌ಗಳು ಬೇಕಿತ್ತು. ಮುಂದಿನ ಎಸೆತದಲ್ಲಿ 2 ರನ್ ಜೊತೆಗೆ ಶತಕ ಪೂರೈಸೋ ಕನಸಿನಲ್ಲಿದ್ದ ಡರೆಲ್‌ ಲೆಕ್ಕಾಚರ ಉಲ್ಟಾ ಆಗಿತ್ತು.

 

 

ಪರ್ನೆಲ್ ಕ್ರಿಕೆಟ್ ಕ್ಲಬ್ ತಂಡ ವೇಗಿ, ಮರು ಎಸೆತವನ್ನ ಬೌಂಡರಿ ಗೆರೆಗೆ ಎಸೆದರು. ಈ ಮೂಲಕ ನೋ ಬಾಲ್ ಹಾಗೂ 4 ರನ್ ಹೆಚ್ಚುವರಿ ನೀಡಿದರು. ಹೀಗಾಗಿ ಮೈನ್‌ಹೆಡ್ ತಂಡ ಗೆಲುವು ಸಾಧಿಸಿತು. ಆದರೆ ಡರೆಲ್ ಅಜೇಯ 98 ರನ್‌ಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪಂದ್ಯದ ಬಳಿಕ ನೋ ಬಾಲ್ ಎಸೆತಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಪರ್ನೆಲ್ ಕ್ರಿಕೆಟ್ ತಂಡ ಕ್ರೀಡಾ ಸ್ಪೂರ್ತಿ ಮರೆತು ಆಡಿದೆ ಎಂಬ ಆರೋಪ ಕೇಳಿಬಂತು. ಇದಕ್ಕೆ ಪರ್ನೆಲ್ ನಾಯಕ ಬೌಲರ್ ಪರವಾಗಿ ಕ್ಷಮೆ ಯಾಚಿಸಿದರು. 

 

ಇದನ್ನು ಓದಿ: ಫೋರ್ಸ್ ಇಂಡಿಯಾ ಮಾಲೀಕತ್ವದಿಂದಲೂ ವಿಜಯ್ ಮಲ್ಯಗೆ ಕೊಕ್!

loader