ಲಂಡನ್[ಜು.23]: ಆ್ಯಷಸ್ ಸರಣಿಗೂ ಮುನ್ನ ಐರ್ಲೆಂಡ್ ವಿರುದ್ಧ ನಡೆಯಲಿರುವ 4 ಪಂದ್ಯಗಳ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಜೇಸನ್ ರಾಯ್ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಲಿದ್ದಾರೆ. 

ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!

ಲಾರ್ಡ್ಸ್’ನಲ್ಲಿ ಜುಲೈ 24ರಿಂದ 27ರವರೆಗೆ ನಡೆಯಲಿರುವ ಟೆಸ್ಟ್ ಏಕೈಕ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಲಾಗಿದ್ದು, ಜೋ ರೂಟ್ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ವಾರವಷ್ಟೇ ನಡೆದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ಗೆದ್ದು ಬೀಗುತ್ತಿರುವ ಇಂಗ್ಲೆಂಡ್, ಇದೀಗ ಐರ್ಲೆಂಡ್ ಬಗ್ಗುಬಡಿಯಲು ತುದಿಗಾಲಿನಲ್ಲಿ ನಿಂತಿದೆ. ಗಾಯದ ಸಮಸ್ಯೆಯಿಂದ ಅನುಭವಿ ವೇಗಿ ಜೇಮ್ಸ್ ಆ್ಯಂಡರ್’ಸನ್ ತಂಡದಿಂದ ಹೊರಬಿದ್ದಿದ್ದರೆ, ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್’ಗೆ ವಿಶ್ರಾಂತಿ ನೀಡಲಾಗಿದೆ.

ಆಗಸ್ಟ್ 01ರಿಂದ ಆರಂಭವಾಗಲಿರುವ ಐತಿಹಾಸಿಕ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಆ್ಯಷಸ್ ಸರಣಿಗೂ ಮುನ್ನ ನಡೆಯುತ್ತಿರುವ ಈ ಟೆಸ್ಟ್ ಪಂದ್ಯವು, ಇಂಗ್ಲೆಂಡ್ ತಂಡಕ್ಕೆ ಅಭ್ಯಾಸ ಪಂದ್ಯವಾಗಲಿದೆ. 

ಇಂಗ್ಲೆಂಡ್ ತಂಡ ಹೀಗಿದೆ:

ರೋರಿ ಬರ್ನ್ಸ್, ಜೇಸನ್ ರಾಯ್, ಜೋ ಡೆನ್ಲಿ, ಜೋ ರೂಟ್[ನಾಯಕ], ಜಾನಿ ಬೇರ್’ಸ್ಟೋ[ಉಪನಾಯಕ], ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಸ್ಯಾಮ್ ಕುರ್ರಾನ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಓಲ್ಲಿ ಸ್ಟೋನ್ಸ್