ನಾಟಿಂಗ್‌ಹ್ಯಾಮ್‌(ಮೇ.19): ಜೇಸನ್‌ ರಾಯ್‌ ಶತಕ ಹಾಗೂ ಬೆನ್‌ ಸ್ಟೋಕ್ಸ್ ಸಿಡಿಸಿದ  ಆಕರ್ಷಕ 71 ರನ್‌ಗಳ ಆಟದ ನೆರವಿನಿಂದ ಇಂಗ್ಲೆಂಡ್‌ ತಂಡ, ಪಾಕಿಸ್ತಾನ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 3 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. 

ಇದನ್ನೂ ಓದಿ: ಟೀಂ ಇಂಡಿಯಾ ಅಭ್ಯಾಸಕ್ಕೆ ಬ್ರೇಕ್- ವಿಶ್ರಾಂತಿಗೆ ಸೂಚಿಸಿದ ಬಿಸಿಸಿಐ ! 

ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ಬಾಬರ್‌ ಆಜಂ ಶತಕದ ನೆರವಿನಿಂದ 7 ವಿಕೆಟ್‌ಗೆ 340 ರನ್‌ ಗಳಿಸಿತು. ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಇನ್ನೂ 3 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು.
ಸ್ಕೋರ್‌: ಪಾಕಿಸ್ತಾನ 340/7 (ಬಾಬರ್‌ 115, ಹಫೀಜ್‌ 59, ಟಾಮ್‌ 4-75), ಇಂಗ್ಲೆಂಡ್‌ 341/7 (ರಾಯ್‌ 114, ಸ್ಟೋಕ್ಸ್‌ 71, ವಾಸಿಂ 2-62)

ವಿಶ್ವಕಪ್ ಟೂರ್ನಿಗೂ ಮುನ್ನ ನಡೆಯುತ್ತಿರುವವ ಈ ಸರಣಿ ಉಭಯ ತಂಡಗಳ ವಿಶ್ವಕಪ್  ತಯಾರಿಗೆ ಪೂರಕವಾಗಿದೆ. ಆದರೆ ಇದೀಗ 3 ಪಂದ್ಯ ಸೋತಿರುವ ಪಾಕಿಸ್ತಾನ, ಇನ್ನುಳಿದಿರುವ ಅಂತಿಮ 2 ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.