ಕೆಲದಿನಗಳ ಹಿಂದಷ್ಟೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಬೆನ್ ಸ್ಟೋಕ್ಸ್ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬೆಂಗಳೂರು(ಫೆ.02): ಇದೇ ತಿಂಗಳು ನಡೆಯುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಖಂಡಿತಾ ಬೃಹತ್ ಮೊತ್ತಕ್ಕೆ ಬಿಕರಿಯಾಗಲಿದ್ದಾರೆ ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಉಪಯುಕ್ತ ಸಂದರ್ಭದಲ್ಲಿ ಭರ್ಜರಿ ಬ್ಯಾಟ್ ಬೀಸುವ ಸ್ಟೋಕ್ಸ್, ವೇಗದ ಬೌಲಿಂಗ್ ಮೂಲಕ ಎದುರಾಳಿಯನ್ನು ಕಂಗೆಡಿಸುತ್ತಾರೆ. ಇನ್ನು ಚುರುಕಿನ ಕ್ಷೇತ್ರ ರಕ್ಷಣೆಯಲ್ಲೂ ಸೈ ಎನಿಸಿಕೊಂಡಿರುವ ಆಲ್ರೌಂಡರ್ ಮೇಲೆ ಐಪಿಎಲ್'ನ ಬಹುತೇಕ ಪ್ರಾಂಚೈಸಿಗಳು ಅವರ ಮೇಲೆ ಕಣ್ಣಿಟ್ಟಿದ್ದು ದುಬಾರಿ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ಐಪಿಎಲ್ ಯುವ ಕ್ರಿಕೆಟಿಗಲ್ಲಿ ಇನ್ನಷ್ಟು ಬದಲಾವಣೆ ತರಲಿದೆ. ಐಪಿಎಲ್'ನಲ್ಲಿ ಆಡುವುದರಿಂದ ಆಟಗಾರನ ಕೌಶಲಗಳು ಸುಧಾರಿಸುತ್ತದೆ. ಹೆಚ್ಚು ಹೆಚ್ಚು ಬೇರೆ-ಬೇರೆ ವಾತಾವರಣದಲ್ಲಿ ಆಡುವುದರಿಂದ ಆತ್ಮವಿಶ್ವಾಸವೂ ಹೆಚ್ಚಲಿದೆ ಎಂದು ಯುವಿ ಹೇಳಿದ್ದಾರೆ.

ಕೆಲದಿನಗಳ ಹಿಂದಷ್ಟೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಬೆನ್ ಸ್ಟೋಕ್ಸ್ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.