2021ನೇ ಸಾಲಿನ ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ ಪ್ರದಾನಏಕಲವ್ಯ ಪ್ರಶಸ್ತಿಗೆ 15, ಕ್ರೀಡಾ ರತ್ನ ಪ್ರಶಸ್ತಿಗೆ 8, ಜೀವಮಾನ ಸಾಧನೆಗೆ 6 ಮಂದಿ ಆಯ್ಕೆಕ್ರೀಡಾ ಪೋಷಕ ಪ್ರಶಸ್ತಿಗೆ ಮೂರು ಸಂಸ್ಥೆಗಳನ್ನು ಆಯ್ಕೆ

ಬೆಂಗಳೂರು(ಡಿ.06) ರಾಜ್ಯ ಸರ್ಕಾರವು 2021ನೇ ಸಾಲಿನ ಏಕಲವ್ಯ, ಕ್ರೀಡಾರತ್ನ, ಜೀವಮಾನ ಸಾಧನೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದ್ದು, ಮಂಗಳವಾರ ಬೆಳಗ್ಗೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಕಾರ‍್ಯಕ್ರಮ ನಡೆಯಲಿದೆ. ಏಕಲವ್ಯ ಪ್ರಶಸ್ತಿಗೆ 15, ಕ್ರೀಡಾ ರತ್ನ ಪ್ರಶಸ್ತಿಗೆ 8, ಜೀವಮಾನ ಸಾಧನೆಗೆ 6 ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ ಮೂರು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಏಕಲವ್ಯ ಪ್ರಶಸ್ತಿ: ಚೇತನ್‌ ಬಿ.-ಅಥ್ಲೆಟಿಕ್ಸ್‌, ಶಿಖಾ-ಬ್ಯಾಡ್ಮಿಂಟನ್‌, ಕೀರ್ತಿ-ಸೈಕ್ಲಿಂಗ್‌, ಅದಿತ್ರಿ-ಫೆನ್ಸಿಂಗ್‌, ಅಮೃತ್‌- ಜಿಮ್ನಾಸ್ಟಿಕ್‌, ಶೇಷೇಗೌಡ-ಹಾಕಿ, ರೇಷ್ಮಾ-ಟೆನಿಸ್‌, ಶ್ರೀಜಯ್‌-ಶೂಟಿಂಗ್‌, ತನೀಷ್‌-ಈಜು, ಯಶಸ್ವಿನಿ-ಟಿಟಿ, ಹರಿಪ್ರಸಾದ್‌-ವಾಲಿಬಾಲ್‌, ಸೂರಜ್‌-ಕುಸ್ತಿ, ಸಾಕ್ಷತ್‌-ನೆಟ್‌ಬಾಲ್‌, ಮನೋಜ್‌-ಬಾಸ್ಕೆಟ್‌ಬಾಲ್‌, ರಾಘವೇಂದ್ರ-ಪ್ಯಾರಾ ಅಥ್ಲೆಟಿಕ್ಸ್‌.

ಪ್ರೊ ಕಬಡ್ಡಿ ಲೀಗ್‌: ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು ಬುಲ್ಸ್‌!

ಜೀವಮಾನ ಸಾಧನೆ: ಅಲ್ಕಾ-ಸೈಕ್ಲಿಂಗ್‌, ಆನಂದ್‌-ಪ್ಯಾರಾ ಬ್ಯಾಡ್ಮಿಂಟನ್‌, ಶೇಖರಪ್ಪ-ಯೋಗ, ಅಶೋಕ್‌-ವಾಲಿಬಾಲ್‌, ರವೀಂದ್ರ- ಕಬಡ್ಡಿ, ಅಮರ್‌ನಾಥ್‌-ಯೋಗಾ.

ಕ್ರೀಡಾರತ್ನ: ಕವನ-ಬಾಲ್ ಬ್ಯಾಡ್ಮಿಂಟನ್‌, ಗಜೇಂದ್ರ-ಗುಂಡು ಎತ್ತುವುದು, ಶ್ರೀಧರ್‌-ಕಂಬಳ, ರಮೇಶ್‌-ಖೋಖೋ, ವೀರಭದ್ರ-ಮಲ್ಲಕಂಬ, ಖುಷಿ-ಯೋಗ, ಲೀನಾ-ಮಟ್ಟಿಕುಸ್ತಿ, ದರ್ಶನ್‌-ಕಬಡ್ಡಿ.

ಕ್ರೀಡಾ ಪೋಷಕ ಪ್ರಶಸ್ತಿ: ಬೆಂಗಳೂರು ನಗರ ಜಿಲ್ಲೆಯ ಬಿ.ಎಂ.ಎಸ್‌.ಮಹಿಳಾ ಕಾಲೇಜು, ಮಂಗಳೂರಿನ ಮಂಗಳ ಫ್ರೆಂಡ್‌್ಸ ಸರ್ಕಲ್‌, ಉಡುಪಿಯ ನಿಟ್ಟೆ ಎಜುಕೇಷನ್‌ ಟ್ರಸ್ಟ್‌

ಪ್ರೊ ಕಬಡ್ಡಿ: ಪುಣೆ, ಜೈಪುರ ಸೆಮೀಸ್‌ಗೆ

ಹೈದರಾಬಾದ್‌: ಪ್ರೊ ಕಬಡ್ಡಿ 9ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟನ್‌ ಹಾಗೂ ಜೈಪುರ ಪಿಂಕ್‌ಪ್ಯಾಂಥ​ರ್ಸ್‌ ಸೆಮಿಫೈನಲ್‌ ಪ್ರವೇಶಿಸಿವೆ. ಸೋಮವಾರ ಪಾಟ್ನಾ ಪೈರೇಟ್ಸ್‌ ವಿರುದ್ಧ ಪುಣೇರಿ 44-30ರಲ್ಲಿ ಗೆದ್ದರೆ, ಇದೇ ಅಂತರದಲ್ಲಿ ಹರ್ಯಾಣ ಸ್ಟೀಲ​ರ್ಸ್ ತಂಡವನ್ನು ಜೈಪುರ ಸೋಲಿಸಿತು. 21 ಪಂದ್ಯಗಳಲ್ಲಿ ಜೈಪುರ ಹಾಗೂ ಪುಣೆ ತಲಾ 79 ಅಂಕಗಳನ್ನು ಪಡೆದಿದೆ. ಆದರೆ ಜೈಪುರ 15 ಗೆಲುವು ಸಾಧಿಸಿದ್ದು 174 ಅಂಕ ವ್ಯತ್ಯಾಸ ಹೊಂದಿರುವ ಕಾರಣ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

FIFA World Cup ಸೆನಗಲ್‌ ಮಣಿಸಿ ಇಂಗ್ಲೆಂಡ್‌ ಕ್ವಾರ್ಟರ್‌ಗೆ ಲಗ್ಗೆ

14 ಜಯ, 70 ಅಂಕ ವ್ಯತ್ಯಾಸ ಹೊಂದಿರುವ ಪುಣೆ 2ನೇ ಸ್ಥಾನದಲ್ಲಿದೆ. ಬೆಂಗಳೂರು ಬುಲ್ಸ್‌, ಯು.ಪಿ.ಯೋಧಾಸ್‌ ಸಹ ಪ್ಲೇ-ಆಫ್‌ಗೇರಿದ್ದು ಈ ತಂಡಗಳ ಜೊತೆ ಇನ್ನೆರಡು ತಂಡಗಳಿಗೆ ಎಲಿಮಿನೇಟರ್‌ ಪಂದ್ಯವನ್ನಾಡಲು ಅರ್ಹತೆ ಸಿಗಲಿದೆ. ಆ ಎರಡು ಸ್ಥಾನಕ್ಕೆ ತಲೈವಾಸ್‌, ಡೆಲ್ಲಿ, ಮುಂಬಾ, ಹರ್ಯಾಣ ನಡುವೆ ಪೈಪೋಟಿ ಇದೆ.

ರಾಜ್ಯ ಕುಸ್ತಿ ಒಕ್ಕೂಟಕ್ಕೆ ಗುಣರಂಜನ್‌ ಅಧ್ಯಕ್ಷ

ಬೆಂಗಳೂರು: ಕರ್ನಾಟಕ ರಾಜ್ಯ ಕುಸ್ತಿ ಫೆಡರೇಷನ್‌ನ ನೂತನ ಅಧ್ಯಕ್ಷರಾಗಿ ಉದ್ಯಮಿ, ಖ್ಯಾತ ನಟಿ ಅನುಷ್ಕಾ ಶೆಟ್ಟಿಅವರ ಸಹೋದರ ಗುಣರಂಜನ್‌ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಕುಸ್ತಿ ಫೆಡರೇಷನ್‌ನ ಮೇಲುಸ್ತುವಾರಿಯಲ್ಲಿ ಭಾನುವಾರ ಚುನಾವಣೆ ನಡೆಯಿತು.

ಹಾಕಿ: ಕೊನೆ ಪಂದ್ಯದಲ್ಲಿ ಭಾರತಕ್ಕೆ 4-5ರ ಸೋಲು

ಅಡಿಲೇಡ್‌: ಆಸ್ಪ್ರೇಲಿಯಾ ವಿರುದ್ಧ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ಹಾಕಿ ತಂಡ 4-5 ಗೋಲುಗಳ ಸೋಲು ಅನುಭವಿಸಿತು. ಸರಣಿ 4-1ರಲ್ಲಿ ಆತಿಥೇಯ ತಂಡದ ಪಾಲಾಯಿತು. ಭಾರತ ಪರ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ 2, ಅಮಿತ್‌ ಆಗೂ ಸುಖ್ಜೀತ್‌ ತಲಾ ಒಂದು ಗೋಲು ಬಾರಿಸಿದರು. ಮುಂದಿನ ತಿಂಗಳ ವಿಶ್ವಕಪ್‌ಗೆ ಅಭ್ಯಾಸ ನಡೆಸಲು ಭಾರತ ಈ ಸರಣಿಯಲ್ಲಿ ಪಾಲ್ಗೊಂಡಿತ್ತು.