ಎಬಿಡಿ ನಂತರ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನ ನಿವೃತ್ತಿ

Ed Joyce announces retirement with immediate effect
Highlights

ಐರ್ಲ್ಯಾಂಡ್ ತಂಡದ ಪರ ಜಾಯ್ಸ್ 78 ಏಕದಿನದಲ್ಲಿ 41 ರನ್ ಸರಾಸರಿಯಲ್ಲಿ  ಅಫ್ಘಾನ್ ವಿರುದ್ಧ 160 ಉತ್ತಮ ರನ್ ನೊಂದಿಗೆ  2151 ರನ್, 18 ಟಿ20 ಪಂದ್ಯಗಳಲ್ಲಿ 27 ಸರಾಸರಿಯೊಂದಿಗೆ 471 ರನ್  ಪೇರಿಸಿದ್ದಾರೆ.

ಮುಂಬೈ(ಮೇ.24): ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಹೇಳಿದ ನಂತರ ಐರ್ಲ್ಯಾಂಡ್ ತಂಡದ ಸ್ಫೋಟಕ ಆಟಗಾರ ಎಡ್ ಜಾಯ್ಸ್ ನಿವೃತ್ತಿ ಘೋಷಿಸಿದ್ದಾರೆ.
ಐರ್ಲ್ಯಾಂಡ್ ತಂಡದ ಪರ ಜಾಯ್ಸ್ 78 ಏಕದಿನದಲ್ಲಿ 41 ರನ್ ಸರಾಸರಿಯಲ್ಲಿ  ಅಫ್ಘಾನ್ ವಿರುದ್ಧ 160 ಉತ್ತಮ ರನ್ ನೊಂದಿಗೆ  2151 ರನ್, 18 ಟಿ20 ಪಂದ್ಯಗಳಲ್ಲಿ 27 ಸರಾಸರಿಯೊಂದಿಗೆ 471 ರನ್  ಪೇರಿಸಿದ್ದಾರೆ. 255 ಪಂದ್ಯಗಳ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ 47 ಶತಕಗಳೊಂದಿಗೆ 18461 ರನ್ ಹೊಡೆದಿರುವುದು ಶ್ಲಾಘನೀಯ. ಇವುಗಳಲ್ಲಿ ಇಂಗ್ಲೆಂಡ್ ಕೌಂಟಿ ಮಿಡಲ್'ಸೆಕ್ಸ್, ಸಸ್ಸೆಕ್ಸ್ ತಂಡಗಳ ವಿರುದ್ಧ ಆಡಿರುವುದು ಸೇರಿಕೊಂಡಿದೆ.

 

loader