ಸಿಎಸ್’ಕೆ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ ಡ್ರೆಸ್ಸಿಂಗ್ ರೂಂನಲ್ಲಿ ಧೋನಿ ಎದುರೇ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬ್ರಾವೋಗೆ ಆಫ್’ಸ್ಪಿನ್ನರ್ ಹರ್ಭಜನ್ ಸಿಂಗ್ ಸಾಥ್ ನೀಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಮುಂಬೈ[ಮೇ.23]: ಸನ್’ರೈಸರ್ಸ್ ಹೈದರಾಬಾದ್ ತಂಡವನ್ನು ರೋಚಕವಾಗಿ ಮಣಿಸಿ ಫೈನಲ್ ಪ್ರವೇಶಿಸಿದ ಚೆನ್ನೈ ಸೂಪರ್’ಕಿಂಗ್ಸ್ ಪಂದ್ಯ ಮುಕ್ತಾಯದ ಬಳಿಕ ಭರ್ಜರಿಯಾಗಿಯೇ ಸಂಭ್ರಮಾಚರಣೆ ಮಾಡಿದ್ದಾರೆ.
ಕೇವಲ 140 ರನ್’ಗಳ ಗುರಿಯನ್ನು ಕಷ್ಟಪಟ್ಟು ಗುರಿ ಸೇರಿದ ಸಿಎಸ್’ಕೆ ದಾಖಲೆಯ 7ನೇ ಬಾರಿಗೆ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. 2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಕಮ್’ಬ್ಯಾಕ್ ಮಾಡಿದ ಸಿಎಸ್’ಕೆ ತಮ್ಮ ಆಟದ ಮೂಲಕ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಸಿಎಸ್’ಕೆ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ ಡ್ರೆಸ್ಸಿಂಗ್ ರೂಂನಲ್ಲಿ ಧೋನಿ ಎದುರೇ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬ್ರಾವೋಗೆ ಆಫ್’ಸ್ಪಿನ್ನರ್ ಹರ್ಭಜನ್ ಸಿಂಗ್ ಸಾಥ್ ನೀಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

View post on Instagram

ಇನ್ನು ಡೈನಿಂಗ್ ಹಾಲ್’ನಲ್ಲೂ ಡ್ವೇನ್ ಬ್ರಾವೋ ಸಿಎಸ್’ಕೆ ಸಹ ಆಟಗಾರ ಜತೆ ಚಾಂಪಿಯನ್ ಸಾಂಗ್’ಗೆ ಡ್ಯಾನ್ಸ್ ಮಾಡುವ ಮೂಲಕ ರಂಜಿಸಿದ್ದಾರೆ. 

View post on Instagram