ಟಿ20 ಕ್ರಿಕೆಟ್‌'ನಲ್ಲಿ ಅತಿಹೆಚ್ಚು ವಿಕೆಟ್ ಪಡೆದಿರುವವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಶ್ರೀಲಂಕಾದ ಲಸಿತ್ ಮಾಲಿಂಗ (228 ಪಂದ್ಯಗಳಲ್ಲಿ 331ವಿಕೆಟ್)ಗಿಂತ ಬ್ರಾವೋ ಬಹಳ ಮುಂದಿದ್ದಾರೆ. ಇನ್ನು ಸುನಿಲ್ ನರೈನ್(262 ಪಂದ್ಯಗಳಲ್ಲಿ 307 ವಿಕೆಟ್) ಮೂರನೇ ಸ್ಥಾನದಲ್ಲಿದ್ದಾರೆ.
ಹೊಬಾರ್ಟ್(ಡಿ.22): ವೆಸ್ಟ್ ಇಂಡೀಸ್'ನ ಡ್ವೇನ್ ಬ್ರಾವೋ ಟಿ20 ಕ್ರಿಕೆಟ್'ನಲ್ಲಿ 400 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಎನ್ನುವ ದಾಖಲೆ ಬರೆದಿದ್ದಾರೆ.
ಆಸ್ಟ್ರೇಲಿಯಾದ ಬಿಗ್'ಬ್ಯಾಶ್'ನಲ್ಲಿ ಮೆಲ್ಬರ್ನ್ ಪರ ಆಡುತ್ತಿರುವ ಬ್ರಾವೋ, ಹೊಬಾರ್ಟ್ ವಿರುದ್ಧದ ಪಂದ್ಯದಲ್ಲಿ 28ರನ್'ಗಳಿಗೆ 5 ವಿಕೆಟ್ ಕಬಳಿಸಿ 400 ವಿಕೆಟ್ ಮೈಲಿಗಲ್ಲು ಸ್ಥಾಪಿಸಿದರು. ಈ ಪಂದ್ಯದಲ್ಲಿ ಬ್ರಾವೋ ಪ್ರತಿನಿಧಿಸುತ್ತಿರುವ ಮೆಲ್ಬರ್ನ್ ರೆನೆಗೇಡ್ಸ್ ತಂಡ 7 ವಿಕೆಟ್'ಗಳ ಗೆಲುವು ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಹೊಬಾರ್ಟ್ ಹರಿಕೇನ್ಸ್ 8 ವಿಕೆಟ್'ಗೆ 164 ರನ್'ಗಳಿಸಿತ್ತು. ಮೆಲ್ಬರ್ನ್ ತಂಡ 18.3 ಓವರ್'ಗಳಲ್ಲಿ 3 ವಿಕೆಟ್'ಗೆ 165 ರನ್'ಗಳಿಸಿ ಜಯದ ನಗೆ ಬೀರಿತು.
ಟಿ20 ಕ್ರಿಕೆಟ್'ನಲ್ಲಿ ಅತಿಹೆಚ್ಚು ವಿಕೆಟ್ ಪಡೆದಿರುವವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಶ್ರೀಲಂಕಾದ ಲಸಿತ್ ಮಾಲಿಂಗ (228 ಪಂದ್ಯಗಳಲ್ಲಿ 331ವಿಕೆಟ್)ಗಿಂತ ಬ್ರಾವೋ ಬಹಳ ಮುಂದಿದ್ದಾರೆ. ಇನ್ನು ಸುನಿಲ್ ನರೈನ್(262 ಪಂದ್ಯಗಳಲ್ಲಿ 307 ವಿಕೆಟ್) ಮೂರನೇ ಸ್ಥಾನದಲ್ಲಿದ್ದಾರೆ.
