ಅಗತ್ಯಬಿದ್ದರೆ ತಾವು ತಂಪಿಗೆ ಸೂಕ್ತ ಮಾರ್ಹದರ್ಶನ ನೀಡುವುದಾಗಿಯೂ ಕೆರಿಬಿಯನ್ ಆಲ್ರೌಂಡರ್ ತಿಳಿಸಿದ್ದಾರೆ.

ರಾಜ್‌ಕೋಟ್(ಏ.20): ಗುಜರಾತ್ ಲಯನ್ಸ್ ತಂಡದ ಯುವ ವೇಗಿ ಕೇರಳ ಮೂಲದ ಬಸಿಲ್ ತಂಪಿ ಅವರಿಗೆ ಕ್ರಿಕೆಟ್‌'ನಲ್ಲಿ ಉಜ್ವಲ ಭವಿಷ್ಯವಿದೆ ಎಂದು ಲಯನ್ಸ್‌'ನ ಸ್ಟಾರ್ ಆಟಗಾರ ಮತ್ತು ವೆಸ್ಟ್ ಇಂಡೀಸ್‌'ನ ಆಲ್ರೌಂಡರ್ ಡ್ವೇನ್ ಬ್ರಾವೋ ಹೇಳಿದ್ದಾರೆ.

ಈ ಆವೃತ್ತಿಯ ಐಪಿಎಲ್‌'ನಲ್ಲಿ ಬಸಿಲ್ ಕರಾರುವಕ್ ಬೌಲಿಂಗ್‌'ನಿಂದ ಗಮನಸೆಳೆದಿದ್ದಾರೆ. ಕಳೆದ ಮಂಗಳವಾರ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಬಸಿಲ್, 38 ಎಸೆತಗಳಲ್ಲಿ 77 ರನ್‌ಗಳಿಸಿ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ್ದ ಸ್ಫೋಟಕ ಬ್ಯಾಟ್ಸ್‌'ಮನ್ ಕ್ರಿಸ್ ಗೇಲ್ ವಿಕೆಟ್ ಪಡೆದಿದ್ದರು. ಆ ಪಂದ್ಯದಲ್ಲಿ ಬಸಿಲ್ 31ರನ್‌'ಗಳಿಗೆ 1 ವಿಕೆಟ್ ಪಡೆದಿದ್ದರು. ಅಲ್ಲದೇ 11 ಎಸೆತಗಳಲ್ಲಿ ಬ್ಯಾಟ್ಸ್‌ಮನ್ ರನ್‌ಗಳಿಸಲು ಸಾಧ್ಯವಾಗದಂತೆ ನೋಡಿಕೊಂಡಿದ್ದರು.

ಬಸಿಲ್ ತಮ್ಮ ಪ್ರದರ್ಶನವನ್ನು ಹೀಗೆ ಮುಂದುವರೆಸಿದರೆ, ಮುಂದೊಂದು ದಿನ ರಾಷ್ಟ್ರೀಯ ತಂಡದಲ್ಲಿ ಆಡಲಿದ್ದಾರೆ ಎಂದು ಬ್ರಾವೋ ಹೇಳಿದ್ದಾರೆ. ಅಗತ್ಯಬಿದ್ದರೆ ತಾವು ತಂಪಿಗೆ ಸೂಕ್ತ ಮಾರ್ಹದರ್ಶನ ನೀಡುವುದಾಗಿಯೂ ಕೆರಿಬಿಯನ್ ಆಲ್ರೌಂಡರ್ ತಿಳಿಸಿದ್ದಾರೆ.