ಬೆಂಗಳೂರು[ಆ.21]: ಭಾರತ ಬ್ಲೂ ಹಾಗೂ ಗ್ರೀನ್‌ ನಡುವಿನ ದುಲೀಪ್‌ ಟ್ರೋಫಿ ಮೊದಲ ಪಂದ್ಯ ಮಳೆಯಿಂದಾಗಿ ಡ್ರಾದಲ್ಲಿ ಅಂತ್ಯವಾಯಿತು. 

ದುಲೀಪ್‌ ಟ್ರೋಫಿ ವೇಳೆ ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್‌

4ನೇ ದಿನವಾದ ಮಂಗಳವಾರ ಕೂಡ ಆಟ ನಡೆಸಲು ಸಾಧ್ಯವಾಗಲಿಲ್ಲ. ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಪಿಚ್‌ ಹಾಗೂ ಔಟ್‌ಫೀಲ್ಡ್‌ ಸಂಪೂರ್ಣ ಒದ್ದೆಯಾಗಿತ್ತು. ಈ ಕಾರಣದಿಂದಾಗಿ ಪಂದ್ಯವನ್ನು ರದ್ದುಗೊಳಿಸಿ ಉಭಯ ತಂಡಗಳಿಗೆ ತಲಾ 1 ಅಂಕ ಹಂಚಲು ನಿರ್ಧರಿಸಲಾಯಿತು. 

ದುಲೀಪ್‌ ಟ್ರೋಫಿ: ಪೊರೆಲ್‌ ದಾಳಿಗೆ ಕುಸಿದ ಭಾರತ ಬ್ಲೂ

ಮೊದಲ ದಿನ ಭಾರತ ಬ್ಲೂ ತಂಡ 6 ವಿಕೆಟ್‌ಗೆ 112 ರನ್‌ ಗಳಿಸಿತ್ತು. ಆ.23ರಿಂದ ಭಾರತ ರೆಡ್‌ ಹಾಗೂ ಬ್ಲೂ ತಂಡಗಳ ನಡುವಿನ ಪಂದ್ಯ ಬೆಂಗಳೂರಿನ ಹೊರವಲಯದಲ್ಲಿರುವ ಆಲೂರು ಮೈದಾನದಲ್ಲಿ ನಡೆಯಲಿದೆ.