ಬೆಂಗಳೂರು[ಆ.18]: ಯುವ ವೇಗಿ ಇಶಾನ್‌ ಪೊರೆಲ್‌ (3-26) ಮಾರಕ ದಾಳಿಯಿಂದಾಗಿ ಭಾರತ ಗ್ರೀನ್‌ ತಂಡ, ಶನಿವಾರದಿಂದ ಇಲ್ಲಿನ ಜಸ್ಟ್‌ ಕ್ರಿಕೆಟ್‌ ಮೈದಾನದಲ್ಲಿ ಆರಂಭವಾಗಿರುವ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಬ್ಲೂ ತಂಡವನ್ನು 6 ವಿಕೆಟ್‌ಗೆ 112 ರನ್‌ ಗಳಿಗೆ ನಿಯಂತ್ರಿಸಿದೆ. 

ಇಂದಿನಿಂದ ಬೆಂಗ್ಳೂರಲ್ಲಿ ದುಲೀಪ್‌ ಟ್ರೋಫಿ

ಮಳೆ ಹಾಗೂ ಮಂದಬೆಳಕಿನ ಕಾರಣ ಮೊದಲ ದಿನದಾಟವನ್ನು ಅವಧಿಗೂ ಮುನ್ನವೇ ಮುಕ್ತಾಯಗೊಳಿಸಲಾಯಿತು. ದಿನದಲ್ಲಿ ಕೇವಲ 49 ಓವರ್‌ಗಳ ಆಟ ಮಾತ್ರ ನಡೆಯಿತು. 

ಟಾಸ್‌ ಗೆದ್ದ ಗ್ರೀನ್‌ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಭಾರತ ಬ್ಲೂ ಪರ ಋುತುರಾಜ್‌ (30), ಅಂಕಿತ್‌ ಬಾವ್ನೆ (21), ಜಲಜ್‌ ಸಕ್ಸೇನಾ (19) ರನ್‌ ಗಳಿಸಿದರೆ, ನಾಯಕ ಶುಭ್‌ಮನ್‌ ಗಿಲ್‌ (6) ನಿರಾಸೆ ಮೂಡಿಸಿದರು.

ಸ್ಕೋರ್‌: ಭಾರತ ಬ್ಲೂ (ಮೊದಲ ದಿನದಂತ್ಯಕ್ಕೆ) 112/6 (ಋುತುರಾಜ್‌ 30, ಅಂಕಿತ್‌ 21*, ಪೊರೆಲ್‌ 3-26)