ಡಬ್ಲ್ಯೂಡಬ್ಲ್ಯೂಇನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರುವ ಗ್ರೇಟ್ ಖಲಿ ನಂತರ ರಿಂಗ್'ನಲ್ಲಿ ಘರ್ಜಿಸಲು ಸುಶೀಲ್ ಕುಮಾರ್ ರೆಡಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ನವದೆಹಲಿ(ಅ.15): ಮಾಜಿ ವಿಶ್ವ ಚಾಂಪಿಯನ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ವಿಶ್ವ ಮನರಂಜನಾ ಕುಸ್ತಿ (ಡಬ್ಲ್ಯೂಡಬ್ಲ್ಯೂಇ)ಗೆ ಸೇರುವ ಸಾಧ್ಯತೆಯಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಡಬ್ಲ್ಯೂಡಬ್ಲ್ಯೂಇನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರು ಗ್ರೇಟ್ ಖಲಿ ನಂತರ ರಿಂಗ್'ನಲ್ಲಿ ಘರ್ಜಿಸಲು ಸುಶೀಲ್ ಕುಮಾರ್ ರೆಡಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಡಬ್ಲ್ಯೂಡಬ್ಲ್ಯೂಇನ ಅಭಿವೃದ್ಧಿ ನಿರ್ದೇಶಕ ಕನ್ಯೋನ್ ಸೆಮನ್, 33 ವರ್ಷ ವಯಸ್ಸಿನ ಸುಶೀಲ್ ಅವರೊಂದಿಗೆ ಡಬ್ಲ್ಯೂಡಬ್ಲ್ಯೂಇಗೆ ಸೇರ್ಪಡೆಯ ಬಗ್ಗೆ ಚರ್ಚಿಸಿದ್ದು, ಉನ್ನತ ಕುಸ್ತಿಯ ಪ್ರಾಂಚೈಸಿ ಹುಡುಕಾಟದಲ್ಲಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಸ್ಥಳೀಯ ಇಂಗ್ಲೀಷ್ ಡೈಲಿ ಪತ್ರಿಕೆ ಕೂಡ ಸುಶೀಲ್ ವೃತ್ತಿಪರ ಕುಸ್ತಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವುದಾಗಿ ವರದಿ ಮಾಡಿದೆ. ಹೀಗಾಗಿ ಸುಶೀಲ್ ವೃತ್ತಿಪರ ಕುಸ್ತಿ ಕಡೆಗೆ ವಾಲುವುದು ಬಹುತೇಕ ಖಚಿತವಾಗಿದೆ.
