ಕಳೆದ 2 ವರ್ಷಗಳ ಹಿಂದೆ 2013ರಲ್ಲಿ ಐಪಿಎಲ್ ನಡೆಯುವ ವೇಳೆ ಮುಂಬೈನಲ್ಲಿ ಜಾಂಟಿ ಅವರ ಪತ್ನಿ ಮೊದಲ ಮಗು ಇಂಡಿಯಾಗೆ (ಇಂಡಿಯಾ ಜಾಂಟಿ ರೋಡ್ಸ್ ಮಗುವಿನ ಹೆಸರು) ಜನ್ಮ ನೀಡಿದ್ದರು.
ಹೈದರಾಬಾದ್(ಮೇ.22): ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಅವರ ಪತ್ನಿ ಮಿಲನೈ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಕಳೆದ ಎರಡು ತಿಂಗಳಿಂದ ಕುಟುಂಬ ಸಮೇತರಾಗಿ ಭಾರತದಲ್ಲಿ ವಾಸವಾಗಿದ್ದರು. ಹೈದರಾಬಾದ್'ನಲ್ಲಿ ಭಾನುವಾರ ಫೈನಲ್ ಪಂದ್ಯ ನಡೆಯುವುದಕ್ಕೂ ಎರಡು ಗಂಟೆ ಮುಂಚಿತವಾಗಿ ಮಿಲನೈ ಗಂಡು ಮಗು ಹುಟ್ಟಿದೆ.
ತಮಗೆ ಗಂಡು ಮಗು ಹುಟ್ಟಿರುವುದು ಒಂದು ಖುಷಿಯಾದರೆ, ಮತ್ತೊಂದೆಡೆ ಮುಂಬೈ ಚಾಂಪಿಯನ್ ಆಗಿರುವುದು ಮತ್ತೊಂದೆಡೆ. ಇವು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. ಮೊದಲ ಮಗುವಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದ ರೋಡ್ಸ್ ಎರಡನೇ ಮಗುವಿಗೆ ನಾಥನ್ ಜಾನ್ ಎಂದು ನಾಮಕರಣ ಮಾಡಿದ್ದಾರೆ.
ಕಳೆದ 2 ವರ್ಷಗಳ ಹಿಂದೆ 2013ರಲ್ಲಿ ಐಪಿಎಲ್ ನಡೆಯುವ ವೇಳೆ ಮುಂಬೈನಲ್ಲಿ ಜಾಂಟಿ ಅವರ ಪತ್ನಿ ಮೊದಲ ಮಗು ಇಂಡಿಯಾಗೆ (ಇಂಡಿಯಾ ಜಾಂಟಿ ರೋಡ್ಸ್ ಮಗುವಿನ ಹೆಸರು) ಜನ್ಮ ನೀಡಿದ್ದರು.