ಡೋಪಿಂಗ್ ಕಾರಣದಿಂದಾಗಿಯೇ 2016ರ ರಿಯೊ ಒಲಿಂಪಿಕ್ಸ್'ನಲ್ಲಿ ರಷ್ಯಾದ ಅಥ್ಲೀಟ್'ಗಳನ್ನು ಹೊರಗಿಡಲಾಗಿತ್ತು.

ಲಂಡನ್(ಸೆ.16): ವೇಟ್‌'ಲಿಫ್ಟಿಂಗ್‌'ಗೆ ಅಂಟಿಕೊಂಡಿರುವ ಡೋಪಿಂಗ್ ವಿವಾದವನ್ನು ಕಳೆಯಲು ಸಾಕಷ್ಟು ಹಂತಗಳನ್ನು ದಾಟಬೇಕಾಗಿದ್ದು, 2024ರಲ್ಲಿ ಪ್ಯಾರೀಸ್‌'ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ವೇಟ್‌'ಲಿಫಿಂಗ್‌'ಗೆ ಸ್ಥಾನ ಲಭ್ಯವಾಗುವುದು ಕಷ್ಟ ಸಾಧ್ಯ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತಿಳಿಸಿದೆ.

ಡೋಪಿಂಗ್ ತಡೆಗಟ್ಟಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತು ಡಿಸೆಂಬರ್ ಒಳಗೆ ವರದಿ ನೀಡುವಂತೆ ಅಂತಾರಾಷ್ಟ್ರೀಯ ವೇಟ್‌'ಲಿಫ್ಟಿಂಗ್ ಫೆಡರೇಷನ್‌'ಗೆ ಐಒಸಿ ಜುಲೈನಲ್ಲಿ ತಿಳಿಸಿತ್ತು.

ಇದೀಗ ವೇಟ್‌'ಲಿಫ್ಟಿಂಗ್ ಫೆಡರೇಷನ್ ನೀಡುವ ವರದಿ ಆಧಾರದ ಮೇಲೆ 2024ರಲ್ಲಿ ವೇಟ್‌'ಲಿಫ್ಟಿಂಗ್‌'ಗೆ ಸ್ಥಾನ ನಿರ್ಧಾರವಾಗಲಿದೆ.

ಡೋಪಿಂಗ್ ಕಾರಣದಿಂದಾಗಿಯೇ 2016ರ ರಿಯೊ ಒಲಿಂಪಿಕ್ಸ್'ನಲ್ಲಿ ರಷ್ಯಾದ ಅಥ್ಲೀಟ್'ಗಳನ್ನು ಹೊರಗಿಡಲಾಗಿತ್ತು.