Asianet Suvarna News Asianet Suvarna News

ಒಲಿಂಪಿಕ್ಸ್'ಗೆ ಮಾರಕವಾಗಲಿರುವ ಡ್ರಗ್ಸ್ ಸಂಸ್ಕೃತಿ

1986ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ 48 ವೇಟ್‌'ಲಿಪ್ಟರ್‌'ಗಳು ಉದ್ದೀಪನಾ ಮದ್ದು ಸೇವಿಸಿದ್ದು ಭಾರೀ ಸುದ್ದಿಗೆ ಗ್ರಾಸವಾಗಿತ್ತು.

Doping Increases Olympic Threat

ಲೌಸಾನ್ನೆ(ಡಿ.06): ವೇಟ್‌'ಲಿಫ್ಟಿಂಗ್ ರಂಗವನ್ನು ಆಕ್ರಮಿಸಿಕೊಂಡಿರುವ ಉದ್ದೀಪನಾ ಮದ್ದು ಸೇವನೆಯ ಪಿಡುಗು ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೇ ಮಾರಕವಾಗಲಿದೆ ಎಂಬ ಆತಂಕ ಈಗ ವಿಶ್ವ ಕ್ರೀಡಾ ರಂಗದಲ್ಲಿ ಉದಯಿಸಿದೆ.

1986ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ 48 ವೇಟ್‌'ಲಿಪ್ಟರ್‌'ಗಳು ಉದ್ದೀಪನಾ ಮದ್ದು ಸೇವಿಸಿದ್ದು ಭಾರೀ ಸುದ್ದಿಗೆ ಗ್ರಾಸವಾಗಿತ್ತು. ನಂತರ 2008ರ ಬೀಜಿಂಗ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್‌'ನಲ್ಲಿ ಸುಮಾರು 104 ಉದ್ದೀಪನಾ ಪರೀಕ್ಷೆಗಳು ಕಳಂಕಿತರನ್ನು ಪತ್ತೆ ಹಚ್ಚಿದ್ದವು.

ಆದರೆ ಈಗ 1243 ಪರೀಕ್ಷಾ ಫಲಿತಾಂಶಗಳು ಮತ್ತಷ್ಟು ಕಳ್ಳ ಆಟಗಾರರನ್ನು ಪತ್ತೆ ಹಚ್ಚಿವೆ.

ಹೀಗೆ, ಡ್ರಗ್ಸ್ ಸಂಸ್ಕೃತಿ ಬೆಳೆಯುತ್ತಿರುವುದು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಮಾರಕವಾಗುವ ಸೂಚನೆ ಎನ್ನಲಾಗಿದೆ.

 

Follow Us:
Download App:
  • android
  • ios