ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಸ್ಥಾನ ಪಡೆದಿಲ್ಲ. ಆದರೆ, ಇದು ಅವರಿಗೆ ಬೇಸರ ತಂದಿಲ್ಲವಂತೆ. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ

ಜೂನ್​ ಒಂದರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಗೊಂಡಿರುವ ಭಾರತ ತಂಡದಲ್ಲಿ ಅನುಭವಿ ಆಟಗಾರ ಹಾಗೂ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಸ್ಥಾನ ಪಡೆದಿಲ್ಲ. ಆದರೆ, ಇದು ಅವರಿಗೆ ಬೇಸರ ತಂದಿಲ್ಲವಂತೆ. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ. ಭಾರತ ತಂಡದಲ್ಲಿ ಸ್ಥಾನ ಪಡೆಯದಿದ್ದಕ್ಕೆ ಬೇಸರವಾಗಿದೆಯೇ ಎಂದು ಪ್ರಶ್ನಿಸಿದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ''ನಾನು ಭಾರತ ತಂಡದಲ್ಲಿ ಸ್ಥಾನ ಸಿಗಲಿ ಎಂದು ಕ್ರಿಕೆಟ್ ಆಡುವುದಿಲ್ಲ. ನನ್ನ ಆತ್ಮ ತೃಪ್ತಿಗೆ ಆಡುತ್ತೇನೆ. ಸ್ಥಾನ ಸಿಗದಿದ್ದರೂ ಚಿಂತೆಯಿಲ್ಲ'' ಎಂದು ಅವರು ವಿವರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred