ನವದೆಹಲಿ(ಸೆ.29): ಟೀಮ್​ ಇಂಡಿಯಾ ನಿಗದಿತ ಓವರ್​ಗಳ ನಾಯಕ ಮಹೇಂದ್ರ ಸಿಂಗ್ ಅವರ ಜೀವನಾಧರಿತ ಸಿನಿಮಾಗೆ ಪಾಕಿಸ್ತಾನದಲ್ಲಿ ನಿಷೇಧವೇರಲಾಗಿದೆ. ನಾಳೆ ವಿಶ್ವಾದ್ಯಂತ, ಸುಶಾಂತ್​ ಸಿಂಗ್ ರಜಪೂತ್​ ಅಭಿನಯದ ‘ಎಂ.ಎಸ್​​ ಧೋನಿ ದಿ ಅನ್​​ಟೋಲ್ಡ್​ ಸ್ಟೋರಿ ಚಿತ್ರ ಬಿಡುಗಡೆಯಾಗಲಿದೆ. ಆದರೆ ಪಾಕಿಸ್ತಾನದಲ್ಲಿ ಮಾತ್ರ ಈ ಚಿತ್ರಕ್ಕೆ ನಿಷೇಧವೇರಲಾಗಿದೆ. ಸದ್ಯ ಉಭಯ ದೇಶಗಳ ನಡುವಿನ ಪರಿಸ್ಥಿತಿಯನ್ನು ಮನಗಂಡು ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡದಂತೆ ತೀರ್ಮಾನಿಸಿರುವುದಾಗಿ ಚಿತ್ರ ಪ್ರಸಾರಕರು ತಿಳಿಸಿದ್ದಾರೆ.