ರಾಜಸ್ಥಾನ ರಾಯಲ್ಸ್ ತಂಡದ ಲೆಗ್’ಸ್ಪಿನ್ನರ್, ಕನ್ನಡಿಗ ಶ್ರೇಯಸ್ ಗೋಪಾಲ್ ಆರ್’ಸಿಬಿ ತಂಡದ ಸ್ಟಾರ್ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ವಿಕೆಟ್ ಪಡೆದಿದ್ದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟಕ್ಕೂ ಅವರೇನಂದ್ರು ನೀವೇ ನೋಡಿ... 

ಜೈಪುರ[ಏ.04]: ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ವಿಕೆಟ್‌ ಕಬಳಿಸಿದ್ದು ನನ್ನ ಜೀವನದ ಶ್ರೇಷ್ಠ ಕ್ಷಣ ಎಂದು ರಾಜಸ್ಥಾನ ರಾಯಲ್ಸ್‌ ತಂಡದ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಹೇಳಿದ್ದಾರೆ. 

IPL 2019: ಫಲಿಸಲಿಲ್ಲ ಪ್ರಾರ್ಥನೆ- RCB ಸೋಲಿನ ಸಂಖ್ಯೆ 4ಕ್ಕೆ ಏರಿಕೆ!

ಮಂಗಳವಾರ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಶ್ರೇಯಸ್‌ ಕೇವಲ 12 ರನ್‌ಗೆ 3 ವಿಕೆಟ್‌ ಕಬಳಿಸಿ ರಾಜಸ್ಥಾನದ ಗೆಲುವಿಗೆ ನೆರವಾಗಿದ್ದರು. ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೇಯಸ್‌, ‘ಒಂದೇ ಪಂದ್ಯದಲ್ಲಿ ಕೊಹ್ಲಿ ಹಾಗೂ ಎಬಿಡಿ ವಿಕೆಟ್‌ ಪಡೆಯುವುದು ನನ್ನಂತಹ ಎಷ್ಟೋ ಯುವ ಕ್ರಿಕೆಟಿಗರ ಬಾಲ್ಯದ ಕನಸಾಗಿರುತ್ತದೆ. ನನ್ನ ವೃತ್ತಿ ಬದುಕಿನ ಶ್ರೇಷ್ಠ ಹಾಗೂ ಐಪಿಎಲ್‌ನ ಅತಿದೊಡ್ಡ ಕ್ಷಣವಿದು’ ಎಂದು ಹೇಳಿದರು.

ವಿಶ್ವಶ್ರೇಷ್ಠ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ವಿಕೆಟ್ ಪಡೆಯಲು ಯೋಜನೆ ರೂಪಿಸುವುದು ಅತಿ ಕಠಿಣ ಕೆಲಸ. ಪಿಚ್’ಗೆ ಅನುಗುಣವಾಗಿ ಬೌಲಿಂಗ್ ಮಾಡಿದೆ, ಹಾಗಾಗಿ ಯಶಸ್ಸು ದೊರೆಯಿತು ಎಂದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಗೋಪಾಲ್ ಹೇಳಿದರು.