ಮೊದಲ ಬಾರಿ ಐಪಿಎಲ್‌'ನಲ್ಲಿ ಆಡುತ್ತಿರುವ ಆ್ಯಂಡ್ರೊ ಟೈ, ಪಾದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ರಾಜ್‌ಕೋಟ್(ಏ.30): ಗಾಯದ ಸಮಸ್ಯೆಯಿಂದಾಗಿ ಗುಜರಾತ್ ಲಯನ್ಸ್ ತಂಡದ ಪ್ರಮುಖ ಬೌಲರ್ ಆ್ಯಂಡ್ರೂ ಟೈ ಪ್ರಸಕ್ತ ಸಾಲಿನ ಐಪಿಎಲ್‌'ನಿಂದ ಹೊರಬಿದ್ದಿದ್ದಾರೆ.

ಶನಿವಾರ ರಾತ್ರಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೌಂಡರಿ ತಡೆಯುವ ರಭಸದಲ್ಲಿ ಟೈ, ತಮ್ಮ ಭುಜಕ್ಕೆ ಪೆಟ್ಟು ಮಾಡಿಕೊಂಡರು. ಈ ವೇಳೆ ಅವರ ಭುಜದ ಮೂಳೆಯ ಕೀಲು ತಪ್ಪಿದ್ದು, ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದ ತಂಡ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಮೊದಲ ಬಾರಿ ಐಪಿಎಲ್‌'ನಲ್ಲಿ ಆಡುತ್ತಿರುವ ಆ್ಯಂಡ್ರೊ ಟೈ, ಪಾದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಆಡಿದ 6 ಪಂದ್ಯಗಳಲ್ಲಿ 12 ವಿಕೆಟ್‌'ಗಳನ್ನು ಕಬಳಿಸಿದ್ದ ಟೈ, ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ್ಯಂಡ್ರೊ ಟೈ ಅನುಪಸ್ಥಿತಿ ಗುಜರಾತ್ ಲಯನ್ಸ್ ತಂಡದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದರೆ ಅತಿಶಯೋಕ್ತಿಯಾಗಲಾರದು.