ಕಜಾನ್‌(ಜು.01): ಫ್ರಾನ್ಸ್‌ ವಿರುದ್ಧ ಪ್ರಿ ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾ 2-1ರ ಮುನ್ನಡೆ ಸಾಧಿಸಿದಾಗ ಕುಣಿದು ಕುಪ್ಪಳಿಸುತ್ತಿದ್ದ, ಅರ್ಜೆಂಟೀನಾದ ಮಾಜಿ ನಾಯಕ ಡಿಗೋ ಮರಡೋನಾ ತಂಡ ಸೋಲುತ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ.

ಅರ್ಜೆಂಟೀನಾ ಪ್ರತಿ ಪಂದ್ಯಕ್ಕೂ ಹಾಜರಾಗಿದ್ದ ಡಿಗೋ ಮರಡೋನಾ, ಗ್ಯಾಲರಿಯಲ್ಲಿ ಕುಳಿತು ತಂಡಕ್ಕೆ ಬೆಂಬಲ ನೀಡಿದ್ದರು. ಅರ್ಜೆಂಟೀನಾ ತಂಡದ ಪ್ರತಿ ಗೆಲುವು ಹಾಗೂ ಗೋಲುಗಳನ್ನ ಅಸ್ವಾದಿಸಿದ ಮರಡೋನಾಗೆ ಇದೀಗ ಫ್ರಾನ್ಸ್ ವಿರುದ್ಧದ ಸೋಲು ತೀವ್ರ ನಿರಾಸೆ ತಂದಿದೆ. 

 ಮರಡೋನಾ ಕಣ್ಣೀರಿಡುತ್ತಿರುವ ಫೋಟೋ ಹಾಗೂ ವಿಡೀಯೋಗಳು ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್‌ ಆಗಿವೆ. ಈ ವಿಶ್ವಕಪ್‌ನಲ್ಲಿ ಮರಡೋನಾ ನೀಡಿದಷ್ಟುಮನರಂಜನೆಯನ್ನು ಮೆಸ್ಸಿ ನೀಡಲಿಲ್ಲ ಎಂದು ಹಲವರು ಟೀಕಿಸಿದ್ದಾರೆ.