‘‘ಆರು ಸೀಮಿತ ಓವರ್‌ಗಳ ಸರಣಿಯನ್ನು ಆಯೋಜಿಸುವುದು ಕಷ್ಟಸಾಧ್ಯವಾಗಿದೆ’’ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಅಧ್ಯಕ್ಷ ಗೈಲ್ಸ್ ಕ್ಲಾರ್ಕ್‌ಗೆ ದೂರವಾಣಿಯಲ್ಲಿ ತಿಳಿಸಿದ್ದರೆಂಬ ಸಂಗತಿಯನ್ನು ಲೋಧಾ ಸಮಿತಿ ಮೂಲಗಳು ತಿಳಿಸಿವೆ ಎಂದು ಪತ್ರಿಕೆ ಹೇಳಿದೆ.
ನವದೆಹಲಿ(ಜ.12): ಇತ್ತೀಚೆಗಷ್ಟೇ ಸರ್ವೋಚ್ಚ ನ್ಯಾಯಾಲಯದಿಂದ ಪದಚ್ಯುತಗೊಂಡ ಬಿಸಿಸಿಐ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ, ಇಂಗ್ಲೆಂಡ್ ಸರಣಿಯನ್ನು ತಡೆಹಿಡಿಯಲು ಯತ್ನಿಸಿದ್ದರೆಂದು ‘ದ ಟೈಮ್ಸ್ ಆಫ್ ಇಂಡಿಯಾ’ ವರದಿ ತಿಳಿಸಿದೆ.
‘‘ಆರು ಸೀಮಿತ ಓವರ್ಗಳ ಸರಣಿಯನ್ನು ಆಯೋಜಿಸುವುದು ಕಷ್ಟಸಾಧ್ಯವಾಗಿದೆ’’ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಅಧ್ಯಕ್ಷ ಗೈಲ್ಸ್ ಕ್ಲಾರ್ಕ್ಗೆ ದೂರವಾಣಿಯಲ್ಲಿ ತಿಳಿಸಿದ್ದರೆಂಬ ಸಂಗತಿಯನ್ನು ಲೋಧಾ ಸಮಿತಿ ಮೂಲಗಳು ತಿಳಿಸಿವೆ ಎಂದು ಪತ್ರಿಕೆ ಹೇಳಿದೆ.
ಶಿರ್ಕೆ ಅವರ ದೂರವಾಣಿ ಕರೆಯಿಂದ ದಿಗಿಲುಗೊಂಡ ಕ್ಲಾರ್ಕ್, ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಗೆ ಬರೆದ ಇ-ಮೇಲ್ನಲ್ಲಿ ಭಾರತ ಪ್ರವಾಸದಲ್ಲಿ ಇಂಗ್ಲೆಂಡ್ ತಂಡಕ್ಕೆ ಈ ಹಿಂದಿನ ಸವಲತ್ತುಗಳಿಂದ ಯಾವುದೇ ತೊಂದರೆಯಿಲ್ಲವೇ ಎಂಬುದನ್ನು ಸ್ವತಃ ಜೊಹ್ರಿ ಅವರಿಂದ ಖಾತ್ರಿಪಡಿಸಿಕೊಂಡರೆಂದು ಹೇಳಲಾಗಿದೆ.
