ಅಕ್ರಮ ಸಂಬಂಧ ಒಪ್ಪಿಕೊಂಡ ಶಮಿ..?

First Published 24, Mar 2018, 1:22 PM IST
Did Mohammed Shami admit extra marital affairs as BCCI retained his annual contract
Highlights

ಕೆಲದಿನಗಳ ಹಿಂದಷ್ಟೇ ಮೊಹಮ್ಮದ್ ಶಮಿ ಅವರನ್ನು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ವಿಚಾರಣೆಗೊಳಪಡಿಸಿ ಕ್ಲೀನ್ ಚಿಟ್ ನೀಡಿತ್ತು.

ನವದೆಹಲಿ(ಮಾ.24): ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮದ್ ಶಮಿ, ತಮಗೆ ಅಕ್ರಮ ಸಂಬಂಧ ಇರುವುದು ನಿಜ ಎಂದು ಬಿಸಿಸಿಐ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ

ವೊಂದು ವರದಿ ಮಾಡಿದೆ.

ಶಮಿ ವಿರುದ್ಧ ಕೇಳಿ ಬಂದಿದ್ದ ಮ್ಯಾಚ್ ಫಿಕ್ಸಿಂಗ್ ಆರೋಪದ ಕುರಿತು, ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ನೀರಜ್ ಕುಮಾರ್ ತನಿಖೆ ನಡೆಸಿದ್ದರು. ವಿಚಾರಣೆ ವೇಳೆ, ಶಮಿ ತಾವು ಅನ್ಯ ಸ್ತ್ರೀಯರೊಂದಿಗೆ ಸಂಬಂಧ ಇರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಪತ್ನಿಗೆ ಸುಳ್ಳು ಹೇಳಿ ದುಬೈ ಸೇರಿದಂತೆ ವಿವಿಧ ಕಡೆಗಳಿಗೆ ಭೇಟಿ ನೀಡುತ್ತಿದ್ದಾಗಿ ವರದಿಯಾಗಿದೆ.

ಕೆಲದಿನಗಳ ಹಿಂದಷ್ಟೇ ಮೊಹಮ್ಮದ್ ಶಮಿ ಅವರನ್ನು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ವಿಚಾರಣೆಗೊಳಪಡಿಸಿ ಕ್ಲೀನ್ ಚಿಟ್ ನೀಡಿತ್ತು.

loader