ಈ ಎಲ್ಲ ಪ್ರಹಸನದ ಬಳಿಕ ಧೋನಿಯ ರಾಜೀನಾಮೆ ನಿರ್ಧಾರವನ್ನ ಪ್ರಸಾದ್ ಪ್ರಕಟಿಸಿದರು. `ಧೋನಿ ಸಮಯ ಪ್ರಜ್ಞೆಯನ್ನ ನಾನು ಅಭಿನಂದಿಸುತ್ಥೇನೆ. ಟೆಸ್ಟ್ ಕ್ರಿಕೆಟ್`ನಲ್ಲಿ ವಿರಾಟ್ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಿದ ಬಗ್ಗೆ ಧೋನಿಗೆ ಸ್ಪಷ್ಟ ಅರಿವಿದೆ' ಎಂದು ಹೇಳಿದ್ದರು.

ಮುಂಬೈ(ಜ.09): ಟೀಮ್ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ಏಕದಿನ ಮತ್ತು ಟಿ-20 ತಂಡದ ನಾಯಕತ್ವ ತ್ಯಜಿಸಿದ್ದರು. ಸ್ವಇಚ್ಛೆಯಿಂದ ಧೋನಿ ಈ ನಿರ್ಧಾರ ಕೈಗೊಂಡಿದ್ಧಾರೆ ಎನ್ನಲಾಗಿತ್ತು. ಆದರೆ, ಅಸಲಿ ಸತ್ಯವೇ ಬೇರೆ. ಧೋನಿ ಬಲವಂತವಾಗಿ ನಾಯಕತ್ವ ತ್ಯಜಿಸುವಂತೆ ಆಯ್ಕೆ ಸಮಿತಿ ಒತ್ತಡ ಹಾಕಿತ್ತು ಎಂದು ವರದಿಗಳು ಕೇಳಿಬರುತ್ತಿವೆ.

ಬಿಸಿಸಿಐ ಮೂಲಗಳನ್ನುದ್ದೇಶಿಸಿ ಹೆಡ್`ಲೈನ್ಸ್ ಟುಡೇ ಮಾಡಿರುವ ವರದಿ ಪ್ರಕಾರ, ಕಳೆದ ವಾರ ನಾಗ್ಪುರದಲ್ಲಿ ನಡೆದ ಜಾರ್ಖಂಡ್ ಮತ್ತು ಗುಜರಾತ್ ತಂಡಗಳ ನಡುವಿನ ರಣಜಿ ಸೆಮಿಫೈನಲ್ ಪಂದ್ಯದ ವೇಳೆ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್`ಕೆ ಪ್ರಸಾದ್, ಧೋನಿಯನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದರು. ನಾಯಕತ್ವ ತ್ಯಜಿಸಲು ಸೂಕ್ತ ಸಮಯ ಎಂದು ಸೂಚಿಸಿದ್ದರು.

ಈ ಎಲ್ಲ ಪ್ರಹಸನದ ಬಳಿಕ ಧೋನಿಯ ರಾಜೀನಾಮೆ ನಿರ್ಧಾರವನ್ನ ಪ್ರಸಾದ್ ಪ್ರಕಟಿಸಿದರು. `ಧೋನಿ ಸಮಯ ಪ್ರಜ್ಞೆಯನ್ನ ನಾನು ಅಭಿನಂದಿಸುತ್ಥೇನೆ. ಟೆಸ್ಟ್ ಕ್ರಿಕೆಟ್`ನಲ್ಲಿ ವಿರಾಟ್ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಿದ ಬಗ್ಗೆ ಧೋನಿಗೆ ಸ್ಪಷ್ಟ ಅರಿವಿದೆ' ಎಂದು ಹೇಳಿದ್ದರು.

ಇದೇವೇಳೆ, ರಣಜಿ ತಂಡದಲ್ಲಿ ಆಡುವ ಕುರಿತಂತೆ ಜಾರ್ಖಂಡಿನಿಂದ ಬಿಸಿಸಿಐ ಪ್ರತಿನಿಧಿಸುವ ಅಧಿಕಾರಿಗಳ ಜೊತೆ ಧೋನಿಗೆ ಮನಸ್ತಾಪ ಉಂಟಾಗಿತ್ತು. ಹೀಗಾಗಿಯೇ, ಧೋನಿಗೆ ಅಷ್ಟಾಗಿ ಬೆಂಬಲ ಸಿಕ್ಕಿಲ್ಲ ಎನ್ನಲಾಗಿದೆ.