ಮಂಗಳವಾರ ದಕ್ಷಿಣ ಪೂರ್ವ ಭಾಗದ ರೈಲ್ವೇ ಸಂಚಾರದಲ್ಲಿ ವಿಶೇಷ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದರು. ರಾಂಚಿಯಿಂದ ಹೌರಾಗೆ ಪ್ರಯಾಣಿಸಿದ ಆ ವ್ಯಕ್ತಿಯನ್ನು ನೋಡಲು ಉಳಿದ ಪ್ರಯಾಣಿಕರೆಲ್ಲಾ ಮುಗಿಬಿದ್ದಿದ್ದರು.

ಕೋಲ್ಕತಾ(ಫೆ.23): ಮಂಗಳವಾರ ದಕ್ಷಿಣ ಪೂರ್ವ ಭಾಗದ ರೈಲ್ವೇ ಸಂಚಾರದಲ್ಲಿ ವಿಶೇಷ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದರು. ರಾಂಚಿಯಿಂದ ಹೌರಾಗೆ ಪ್ರಯಾಣಿಸಿದ ಆ ವ್ಯಕ್ತಿಯನ್ನು ನೋಡಲು ಉಳಿದ ಪ್ರಯಾಣಿಕರೆಲ್ಲಾ ಮುಗಿಬಿದ್ದಿದ್ದರು.

ಅಂದಹಾಗೆ ಆ ಪ್ರಯಾಣಿಕ ಮತ್ತಾರೂ ಅಲ್ಲ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ. ಕೋಲ್ಕತಾದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಜಾರ್ಖಂಡ್ ತಂಡದ ಸಾರಥ್ಯ ಹೊತ್ತಿರುವ ಧೋನಿ ತಮ್ಮ ತಂಡದೊಟ್ಟಿಗೆ ಸೆಕೆಂಡ್ ಟೈರ್-ಎಸಿ 18616 ಕ್ರಿಯಾ ಯೋಗಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದರು.

ಭಾರತ ತಂಡದ ಸ್ಟಾರ್ ಆಟಗಾರನಾದರೂ ಯಾವುದೇ ವಿಶೇಷ ಸೌಲಭ್ಯಗಳನ್ನು ಪಡೆಯದೇ ಸಾಮಾನ್ಯ ರೈಲಿನಲ್ಲಿ ಪ್ರಯಾಣಿಸಿದ್ದು ಗಮನೀಯವಾಗಿತ್ತು. ಅಂದಹಾಗೆ 2000ದ ಆರಂಭದ ದಿನಗಳಲ್ಲಿ ಖರ್ಗಾಪುರದಲ್ಲಿ ಧೋನಿ ರೈಲ್ವೇ ಟಿಕೆಟ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.