ಧರ್ಮಾಶಾಲ(ಅ.16): ಟೀಂ ಇಂಡಿಯಾವನ್ನು ಎಲ್ಲಾ ಮಾದರಿಯಲ್ಲಿ ವಿರಾಟ್ ಕೊಹ್ಲಿ ಮುನ್ನಡೆಸಬೇಕೆಂಬ ಮಾತುಗಳು ಕೇಳಿ ಬರ್ತಿವೆ. ಇದರ ಬೆನ್ನಲೇ ಟೀಮ್ ಇಂಡಿಯಾ ನಾಯಕ ಧೋನಿ ಕೊಹ್ಲಿ ಕುರಿತಂತೆ ಮಾತನಾಡಿದ್ದಾರೆ. 

ಪಂದ್ಯ ನಡೆಯುವ ಸಂದರ್ಭದಲ್ಲಿ ಮೈದಾನದಲ್ಲಿ ಈಗಾಗಲೇ ಕೊಹ್ಲಿಯ ಬುದ್ದಿವಂತಿಕೆ ಬಳಿಸಿಕೊಂಡಿದ್ದಾಗಿ ಧೋನಿ ಬಹಿರಂಗಪಡಿಸಿದ್ದಾರೆ. ಇದರಿಂದ ತಂಡಕ್ಕೆ ಸಹಾಯವಾಗಿದೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ. 

ಕೊಹ್ಲಿ ಸಲಹೆ-ಸೂಚನೆಗಳನ್ನು ಮೈದಾನದಲ್ಲಿ ಅನೇಕ ವೇಳೆ ನಾನು ಕಾರ್ಯರೂಪಕ್ಕೆ ತಂದಿದ್ದೇನೆ. ನಿಮಗೆ ಸಾಕ್ಷಿ ಏನಾದ್ರೂ ಬೇಕಾದ್ರೆ ಹಿಂದಿನ ಪಂದ್ಯಗಳನ್ನು ಗಮನಿಸಿ. ಏಕೆಂದ್ರೆ ಇಬ್ಬರು ಒಟ್ಟಾಗಿ ಯೋಚಿಸುವುದರಿಂದ ಹೆಚ್ಚು ಲಾಭವಾಗುತ್ತದೆ ಎಂಬ ಅರ್ಥದಲ್ಲಿ ಧೋನಿ ತಿಳಿಸಿದ್ದಾರೆ.