ಇಮ್ರಾನ್ ತಾಹಿರ್ ಬೌಲಿಂಗ್ ಮಾಡುವ ವೇಳೆ ಚೆಂಡು ಪೋಲ್ಲಾರ್ಡ್ ಬ್ಯಾಟ್'ಗೆ ಬಡಿದಿತ್ತು. ಆಗ ಧೋನಿ ಪುಣೆ ತಂಡದ ನಾಯಕನಲ್ಲದಿದ್ದರೂ ಡಿಆರ್'ಎಸ್'ಗೆ ಮನವಿ ಸಲ್ಲಿಸುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದರು.

ಪುಣೆ(ಏ.07): ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಲೀಗ್‌ನ ಲೆವಲ್ ಒಂದರ 2.1.1ರ ನಿಯಮವನ್ನು ಉಲ್ಲಂಘಿಸಿದ ತಪ್ಪಿಗಾಗಿ ಭಾರತ ತಂಡದ ಮಾಜಿ ನಾಯಕ ಹಾಗೂ ಪುಣೆ ಸೂಪರ್ ಜೈಂಟ್ ತಂಡದ ಆಟಗಾರ ಎಂ.ಎಸ್. ಧೋನಿಗೆ ಪಂದ್ಯ ರೆಫರಿ ಮನು ನಾಯರ್ ವಾಗ್ದಂಡನೆ ವಿಧಿಸಿದ್ದಾರೆ.

ಮೊದಲಿಗೆ ಧೋನಿಗೆ ಯಾವ ಕಾರಣಕ್ಕೆ ವಾಗ್ದಂಡನೆ ವಿಧಿಸಲಾಯಿತು ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಆದರೆ, ಡಿಆರ್‌ಎಸ್‌ಗೆ ಮನವಿ ಮಾಡಿದ್ದೇ ಧೋನಿ ವಿರುದ್ಧದ ವಾಗ್ದಂಡನೆಗೆ ಕಾರಣವೆಂದು ಆನಂತರ ತಿಳಿಯಲಾಯಿತು.

ಧೋನಿಯ ಈ ವರ್ತನೆ ಕ್ರೀಡಾ ಸ್ಫೂರ್ತಿಗೆ ಧಕ್ಕೆ ತಂದಿದ್ದು, ಈ ವಿಷಯದಲ್ಲಿ ಪಂದ್ಯ ರೆಫರಿ ನಿರ್ಣಯವೇ ಅಂತಿಮವಾಗಿರಲಿದೆ.

ಇಮ್ರಾನ್ ತಾಹಿರ್ ಬೌಲಿಂಗ್ ಮಾಡುವ ವೇಳೆ ಚೆಂಡು ಪೋಲ್ಲಾರ್ಡ್ ಬ್ಯಾಟ್'ಗೆ ಬಡಿದಿತ್ತು. ಆಗ ಧೋನಿ ಪುಣೆ ತಂಡದ ನಾಯಕನಲ್ಲದಿದ್ದರೂ ಡಿಆರ್'ಎಸ್'ಗೆ ಮನವಿ ಸಲ್ಲಿಸುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದರು. ಈ ಹಿಂದಿನ ಏಕದಿನ ಸರಣಿಯಲ್ಲೂ ವಿರಾಟ್ ಕೊಹ್ಲಿಗಿಂತ ಮೊದಲೇ ಡಿಆರ್'ಎಸ್'ಗೆ ಮನವಿ ಸಲ್ಲಿಸಿದ್ದು ನಿಜವಾದ ನಾಯಕ ಯಾರು ಎನ್ನುವ ಚರ್ಚೆಯನ್ನು ಹುಟ್ಟುಹಾಕಿ