ಇಂಗ್ಲೆಂಡ್ ವಿರುದ್ಧದ ಸರಣಿ ಜಯದ ಬಳಿಕ ಭಾರತದ ಯಶಸ್ವಿ ಸ್ಪಿನ್ನರ್ ಆರ್. ಅಶ್ವಿನ್`ಗೆ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಘೋಷಿಸಿದೆ. ಈ ಸಂತಸವನ್ನ ಇಂಡಿಯನ್ ಕ್ರಿಕೆಟ್ ಫೇಸ್ಬುಕ್ ಪೇಜ್`ನಲ್ಲಿ ಹಂಚಿಕೊಂಡಿರುವ ಅಶ್ವಿನ್ ಯಶಸ್ಸಿಗೆ ಕಾರಣರಾದ ಬಹುತೇಕರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಐಸಿಸಿ, ಟೀಮ್ ಇಂಡಿಯಾ, ಕೊಹ್ಲಿ, ರವಿಶಾಸ್ತ್ರೀ, ಕುಟುಂಬ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಆದರೆ, ಧೋನಿ ಥ್ಯಾಂಕ್ಸ್ ಹೇಳದ ಬಗ್ಗೆ ಅಭಿಮಾನಿಗಳು ಕೋಪಗೊಂಡಿದ್ದಾರೆ.
ನವದೆಹಲಿ(ಡಿ.23): ಇಂಗ್ಲೆಂಡ್ ವಿರುದ್ಧದ ಸರಣಿ ಜಯದ ಬಳಿಕ ಭಾರತದ ಯಶಸ್ವಿ ಸ್ಪಿನ್ನರ್ ಆರ್. ಅಶ್ವಿನ್`ಗೆ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಘೋಷಿಸಿದೆ. ಈ ಸಂತಸವನ್ನ ಇಂಡಿಯನ್ ಕ್ರಿಕೆಟ್ ಫೇಸ್ಬುಕ್ ಪೇಜ್`ನಲ್ಲಿ ಹಂಚಿಕೊಂಡಿರುವ ಅಶ್ವಿನ್ ಯಶಸ್ಸಿಗೆ ಕಾರಣರಾದ ಬಹುತೇಕರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಐಸಿಸಿ, ಟೀಮ್ ಇಂಡಿಯಾ, ಕೊಹ್ಲಿ, ರವಿಶಾಸ್ತ್ರೀ, ಕುಟುಂಬ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಆದರೆ, ಧೋನಿ ಥ್ಯಾಂಕ್ಸ್ ಹೇಳದ ಬಗ್ಗೆ ಅಭಿಮಾನಿಗಳು ಕೋಪಗೊಂಡಿದ್ದಾರೆ.
ಈ ಕುರಿತು, ಟ್ವಿಟ್ಟರ್`ನಲ್ಲಿ ಪ್ರಶ್ನಿಸಿರುವ ಅಭಿಮಾನಿಗಳು, ಧೋನಿಯನ್ನ ಮರೆತುಬಿಟ್ಟಿರಾ..? ನಿಮ್ಮ ಯಶಸ್ಸಿನಲ್ಲಿ ಧೋನಿ ಮಾತ್ರವಿಲ್ಲವೇ..? ಒಬ್ಬ ಸ್ಪಿನ್ನರ್ ಆಗಿ ರೂಪುಗೊಳ್ಳುವಲ್ಲಿ ಧೋನಿ ಕೊಟ್ಟ ಅವಕಾಶ ಕಾರಣವಲ್ಲವೇ? ಎಂದೆಲ್ಲ ಪ್ರಶ್ನಿಸಿದ್ಧಾರೆ.
