Asianet Suvarna News Asianet Suvarna News

ಆಯ್ಲ್ ಕಂಪೆನಿಗೆ ಒಂದು ದಿನದ CEO ಆದ ಧೋನಿ!

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್'ನಿಂದ ಕೊಂಚ ದೂರವಿರುವ ಧೋನಿ ಕಂಪೆನಿಯೊಂದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದು, ಇಲ್ಲಿನ CEO ಕೂಡಾ ಆಗಿದ್ದಾರೆ. ಇದೇನಪ್ಪಾ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

Dhoni Became CEO for one day
  • Facebook
  • Twitter
  • Whatsapp

ಮುಂಬೈ(ಎ.05): ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್'ನಿಂದ ಕೊಂಚ ದೂರವಿರುವ ಧೋನಿ ಕಂಪೆನಿಯೊಂದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದು, ಇಲ್ಲಿನ CEO ಕೂಡಾ ಆಗಿದ್ದಾರೆ. ಇದೇನಪ್ಪಾ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ವಾಸ್ತವವಾಗಿ ಮುಂಬೈನ ಇಂಡಿಯಾ ಆಯ್ಲ್ ಕಂಪೆನಿ ಮಹೇಂದ್ರ ಸಿಂಗ್ ಧೋನಿಯನ್ನು ತನ್ನ ಒಂದು ದಿನದ CEO ಾಗಿ ನೇಮಿಸಿತ್ತು. ಹೀಗಾಗಿ ಧೋನಿ ಓರ್ವ ಅಧಿಕಾರಿಯಂತೆ ಸೂಟ್ ಧರಿಸಿ ಕಚೇರಿಗೆ ತೆರಳಿ ಕೆಲಸ ನಿರ್ವಹಿಸಿದ್ದಾರೆ.

ಸ್ಪೋರ್ಟ್ ಸ್ಟಾರ್ ಬಿತ್ತರಿಸಿದ ಸುದ್ದಿಯನ್ವಯ ಧೋನಿ CEO ಆಗಿ ಕಾರ್ಯ ನಿರ್ವಹಿಒಸಿದ ಮಾಹಿತಿ ಅವರ ಗೆಳೆಯ ಅರುಣ್ ಪಾಂಡೆ ನೀಡಿರುವುದಾಗಿ ತಿಳಿದು ಬಂದಿದೆ. ಪಾಂಡೆ ಹೇಳಿರುವ ಅನ್ವಯ ಧೋನಿ CEO ಆದ ಕ್ಷಣ ಧೋನಿ ಹಾಗೂ ಕಂಪೆನಿ ಇಬ್ಬರಿಗೂ ತುಂಬಾ ಸ್ಪೆಷಲ್ ಆಗಿತ್ತಂತೆ.

ಇಂದಿನಿಂದ ಆರಂಭವಾಗುವ IPL ಪಂದ್ಯದಲ್ಲಿ ಧೋನಿ ಪುಣೆ ತಂಡದ ಪರವಾಗಿ ಮೈದಾನಕ್ಕಿಳಿಯಲಿದ್ದಾರೆ ಇದಕಕ್ಕಾಗಿ ಅವರ ಉತ್ತಮ ಅಭ್ಯಾಸ ಮಾಡಿದ್ದಾರೆ ಎಂಬ ವಿಚಾರವೂ ತಿಳಿದು ಬಂದಿದೆ.

ವರದಿ: ಸ್ಪೋರ್ಟ್ ಸ್ಟಾರ್

Follow Us:
Download App:
  • android
  • ios