ಮೊದಲ ವಿಕೆಟ್'ಗೆ ರಾಹುಲ್ ಹಾಗೂ ಧವನ್ 164 ರನ್'ಗಳ ಜತೆಯಾಟವಾಡುವ ಮೂಲಕ ಭದ್ರಬುನಾದಿ ಒದಗಿಸಿದರು. 94 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಶಿಖರ್ ಧವನ್ 94 ರನ್ ಬಾರಿಸಿ ಶನಕಗೆ ವಿಕೆಟ್ ಒಪ್ಪಿಸಿದರು.
ಕೋಲ್ಕತಾ(ನ.19): ಶಿಖರ್ ಧವನ್ ಶತಕ ವಂಚಿತ ಬ್ಯಾಟಿಂಗ್ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಅಜೇಯ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಟೆಸ್ಟ್'ನ ಎರಡನೇ ಇನಿಂಗ್ಸ್'ನಲ್ಲಿ ಒಂದು ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿದ್ದು, ಒಟ್ಟಾರೆ 49 ರನ್'ಗಳ ಮುನ್ನಡೆ ಸಾಧಿಸಿದೆ.
ಶ್ರೀಲಂಕಾ ತಂಡವನ್ನು 294 ರನ್'ಗಳಿಗೆ ಆಲೌಟ್ ಮಾಡಿ ಎರಡನೇ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್'ಗೆ ರಾಹುಲ್ ಹಾಗೂ ಧವನ್ 164 ರನ್'ಗಳ ಜತೆಯಾಟವಾಡುವ ಮೂಲಕ ಭದ್ರಬುನಾದಿ ಒದಗಿಸಿದರು. 94 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಶಿಖರ್ ಧವನ್ 94 ರನ್ ಬಾರಿಸಿ ಶನಕಗೆ ವಿಕೆಟ್ ಒಪ್ಪಿಸಿದರು. ಇನ್ನು ರಾಹುಲ್ 73* ರನ್ ಬಾರಿಸಿದ್ದು ಕೊನೆಯ ದಿನ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಚೇತೇಶ್ವರ್ ಪೂಜಾರ 2* ಬಾರಿಸಿದ್ದಾರೆ.
ಇದಕ್ಕೂ ಮೊದಲು ಮೂರನೇ ದಿನದಂತ್ಯಕ್ಕೆ 165/4 ರನ್ ಕಲೆಹಾಕಿ ಸುಭದ್ರ ಸ್ಥಿತಿಯತ್ತ ಮುನ್ನುಗ್ಗುತ್ತಿದ್ದ ಶ್ರೀಲಂಕಾಕ್ಕೆ ಭಾರತದ ವೇಗಿ ಬ್ರೇಕ್ ಹಾಕಿದರು. ಕೆಳಕ್ರಮಾಂಕದಲ್ಲಿ ರಂಗಾನಾ ಹೆರಾತ್ 67 ರನ್ ಬಾರಿಸಿ ತಂಡವನ್ನು 250ರ ಗಡಿ ದಾಟಿಸಿದರು. ಟೀಂ ಇಂಡಿಯಾ ಪರ ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರೆ, ಉಮೇಶ್ ಯಾದವ್ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನಿಂಗ್ಸ್: 172/10 & 171/1
ಶಿಖರ್ ಧವನ್: 94
ಕೆ.ಎಲ್ ರಾಹುಲ್: 73*
ಶನಕ: 29/1
ಶ್ರೀಲಂಕಾ: 294/10
ರಂಗನಾ ಹೆರಾತ್: 67
ಆ್ಯಂಜಲೋ ಮ್ಯಾಥ್ಯೂಸ್: 52
ಭುವನೇಶ್ವರ್ ಕುಮಾರ್: 88/4
(ನಾಲ್ಕನೇ ದಿನದಂತ್ಯಕ್ಕೆ)
