ದೇವಧರ್ ಟ್ರೋಪಿ ಭಾರತ ಎ ಸೋಲಿಸಿ ಫೈನಲ್ ಪ್ರವೇಶಿಸಿದ ಕರ್ನಾಟಕ

First Published 6, Mar 2018, 10:17 PM IST
Deodhar Trophy Allround Karnataka sails into final
Highlights

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಉತ್ತಮ ಆರಂಭದ ಹೊರತಾಗಿಯೂ ಆಘಾತ ಅನುಭವಿತು. ಮಯಾಂಕ್ ಅಗರ್ವಾಲ್  22 ರನ್ ಹೊಡೆದು ಔಟಾದರು. ಆನಂತರ ನಾಯಕ ಕರುಣ್ ನಾಯರ್ ಮತ್ತು ಆರ್. ಸಮರ್ಥ್​ ತಂಡದ ಮೊತ್ತ ನೂರರ ಗಡಿ ದಾಟಿಸಿದರು. ಕರುಣ್​ 35 ರನ್​​​​​​​​​​​ ಗಳಿಸಿ ನಿರ್ಗಮಿಸಿದರು.

ವಿಜಯ್​​ ಹಜಾರೆ ಟ್ರೋಫಿ ಚಾಂಪಿಯನ್ಸ್​​​ ಕರ್ನಾಟಕ ತಂಡ ಭಾರತ ಎ ತಂಡದ ವಿರುದ್ಧದ ಕೊನೆಯ ಲೀಗ್​ ಪಂದ್ಯದಲ್ಲಿ 65 ರನ್'ಗಳ ಭರ್ಜರಿ ಜಯ ಸಾಧಿಸಿ ದೇವ್​ಧರ್​​ ಟ್ರೋಫಿಯ ಫೈನಲ್​ ಪ್ರವೇಶಿಸಿದ್ದಾರೆ.

ಕಳೆದ ವಾರವಷ್ಟೇ ವಿಜಯ್​ ಹಜಾರೆ ಟ್ರೋಪಿ ಫೈನಲ್​ನಲ್ಲಿ ಕಮಾಲ್​ ಮಾಡಿದ್ದ ಕನ್ನಡಿಗರು ಮತ್ತೊಂದು ಫೈನಲ್​ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಮಾ.8ರಂದು ಫೈನಲ್​ ಹಣಾಹಣಿ ನಡೆಯಲಿದೆ

ಸಮರ್ಥ್​-ದೇಶಪಾಂಡೆ ಅಮೋಘ ಆಟ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಉತ್ತಮ ಆರಂಭದ ಹೊರತಾಗಿಯೂ ಆಘಾತ ಅನುಭವಿತು. ಮಯಾಂಕ್ ಅಗರ್ವಾಲ್  22 ರನ್ ಹೊಡೆದು ಔಟಾದರು. ಆನಂತರ ನಾಯಕ ಕರುಣ್ ನಾಯರ್ ಮತ್ತು ಆರ್. ಸಮರ್ಥ್​ ತಂಡದ ಮೊತ್ತ ನೂರರ ಗಡಿ ದಾಟಿಸಿದರು. ಕರುಣ್​ 35 ರನ್​​​​​​​​​​​ ಗಳಿಸಿ ನಿರ್ಗಮಿಸಿದರು.

ಈ ಹಂತದಲ್ಲಿ ಸಮರ್ಥ್​ ಮತ್ತು ಪವನ್ ದೇಶಪಾಂಡೆ ಜೊತೆಗೂಡಿ ಭಾರತ ಎ ತಂಡದ ಬೌಲರ್​ಗಳನ್ನ ಕಾಡಿದರು. ಸಿಕ್ಕಸಿಕ್ಕ ಬೌಲರ್​ಗಳ ಮೇಲೆ ಸವಾರಿ ಮಾಡಿ ಇಬ್ಬರು ತಲಾ ಅರ್ಧಶತಕ ಬಾರಿಸಿದರು. ಇವರಿಬ್ಬರು 131 ರನ್​ಗಳ ಜೊತೆಯಾಟವಾಡುವ ಮೂಲಕ ರನ್ ಹೊಳೆ ಹರಿಸಿದರು. ಆದರೆ ಶತಕದ ಅಂಚಿನಲ್ಲಿ ಪೆವಿಲಿಯನ್'ಗೆ ತೆರಳಿದರು.

ಕೊನೆಯ ಓವರ್'ಗಳಲ್ಲಿ ಸ್ಟುವರ್ಟ್​ ಬಿನ್ನಿ ಮತ್ತು ಸಿಎಂ ಗೌತಮ್ ಉತ್ತಮ ಆಟವಾಡಿ ರಾಜ್ಯ ತಂಡ 300ರ ಗಡಿ ದಾಡಲು ಕಾರಣರಾದರು.

ಬಿನ್ನಿ 37 ಹಾಗೂ ಗೌತಮ್ 49 ರನ್ ಸಿಡಿಸಿದ್ರು.ಕರ್ನಾಟಕ 50 ಓವರ್​ನಲ್ಲಿ 4 ವಿಕೆಟ್​ಗೆ 339 ರನ್ ಬಾರಿಸ್ತು. ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ 10 ಓವರ್​ನಲ್ಲಿ 96 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದ್ರು.

ಭಾರತ ಎ ತಂಡಕ್ಕೆ 340 ರನ್ ಟಾರ್ಗೆಟ್​

ಗೆಲ್ಲುವ ವಿಶ್ವಾಸದಿಂದಲೇ ಇನಿಂಗ್ಸ್​​​ ಆರಂಭಿಸಿದ ಪೃಥ್ವಿ ಶಾ ಮತ್ತು ಉನ್ಮುಕ್ತ್​​​ ಚಂದ್​​  ವೇಗದ 73 ರನ್ ಗಳಿಸುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ನೀಡಿದರು.

ವೇಗವಾಗಿ ಮುನ್ನಗುತ್ತಿದ್ದ ಈ ಜೋಡಿಗೆ ಬ್ರೇಕ್​ ಹಾಕಿದ್ದು ರೊನಿತ್​ ಮೊರೆ.  40 ರನ್ ​ಸಿಡಿಸಿದ್ದ ಪೃಥ್ವಿ ಶಾರನ್ನ ಮೊರೆ ಪೆವಿಲಿಯನ್​ಗೆ ಕಳುಹಿಸಿದರು. ಶಾ ನಿರ್ಗಮಿಸಿದರೂ ತಂಡದ ರನ್​ ವೇಗ ಕಮ್ಮಿಯಾಗಲಿಲ್ಲ. ಉನ್ಮುಕ್ತ್​​​ ಚಂದ್​​​ರನ್ನ ಕೂಡಿಕೊಂಡ ಶುಭ್​ ಮನ್​ ಗಿಲ್​ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದರು. ಆರಂಭದಿಂದಲೂ ಉತ್ತಮವಾಗಿ ಬ್ಯಾಟ್​​ ಮಾಡಿದ ಉನ್ಮುಕ್ತ್​​ ಚಂದ್​​​ ಅರ್ಧಶತಕ ಪೂರೈಸಿದರು.

ಆದರೆ 28 ಓವರ್​​ ಆಗ್ತಿದ್ದ ಹಾಗೆ ಎದುರಾಳಿ ತಂಡದ ವಿಕೆಟ್​ಗಳು ಬೀಳೋಕೆ ಶುರುವಾಯ್ತು. ಉತ್ತಮವಾಗಿ ಆಡ್ತಿದ್ದ ಚಂದ್​​ ನಂತರ ಬಂದ ಅಂಕಿತ್​​ ಬಾವನೆ ಅವರ ನಂತರ  ಇಶಾನ್​ ಕಿಶನ್​ ಕೂಡ ವಿಕೆಟ್​​ ಒಪ್ಪಿಸಿದರು.

ಇದಾದ ಬಳಿಕ ಭಾರತ ಎ  ತಂಡ ಚೇತರಿಸಿಕೊಳ್ಳಲೇ ಇಲ್ಲ. ಇಶಾನ್​ ಕಿಶನ್​ ನಂತರ ಬಂದ ಯಾವೊಬ್ಬ ಬ್ಯಾಟ್ಸ್​​ಮನ್​ ಕೂಡ ಕ್ರೀಸ್​ಗೆ ಕಚ್ಚಿ ನಿಲ್ಲಲೇ ಇಲ್ಲ. 193ರನ್​​ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ಎ, 274 ರನ್​ ಆಗುವಷ್ಟರಲ್ಲೇ ಆಲೌಟ್​​ ಆಗಿಬಿಡ್ತು. ​​​ಅದ್ಭುತ ಬೌಲಿಂಗ್​ ಮಾಡಿದ ಕೆ. ಗೌತಮ್​ ಪ್ರಮುಖ 4 ವಿಕೆಟ್​​ ಪಡೆದು ಮಿಂಚಿದರು. 

ಈ ಸೋಲಿನಿಂದ ಭಾರತ ಎ ತಂಡ ಟೂರ್ನಿಯಿಂದ ನಿರ್ಗಮಿಸಿದರೆ ಕರ್ನಾಟಕ ಈ ಗೆಲುವಿನೊಂದಿಗೆ ಫೈನಲ್​ ಪ್ರವೇಶಿಸಿದೆ. ನಾಳೆ ಇದೇ ಮೈದಾನದಲ್ಲಿ ನಡೆಯೋ ಫೈನಲ್​ ಪಂದ್ಯದಲ್ಲಿ ಭಾರತ ಬಿ ತಂಡದ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ.

 

ಸ್ಕೋರ್

ಕರ್ನಾಟಕ 50 ಓವರ್'ಗಳಲ್ಲಿ 339/4

ಭಾರತ ಎ 274/10

ಫಲಿತಾಂಶ ಕರ್ನಾಟಕಕ್ಕೆ 65 ರನ್ ಜಯ

loader