ಮೊದಲ ಸೆಷನ್'ನಲ್ಲೇ ಬಂಗಾಳವನ್ನು ಆಲೌಟ್ ಮಾಡಿದ ಡೆಲ್ಲಿ, ಬಳಿಕ ಬ್ಯಾಟಿಂಗ್'ನಲ್ಲಿ ದಿಟ್ಟ ಪ್ರದರ್ಶನ ನೀಡಿತು. ಅನುಭವಿ ಎಡಗೈ ಬ್ಯಾಟ್ಸ್'ಮನ್ ಗಂಭೀರ್ ಹಾಗೂ ಚಂಡೀಲಾ ಬಂಗಾಳ ಬೌಲರ್'ಗಳನ್ನು ಮನ ಬಂದಂತೆ ದಂಡಿಸಿದರು.
ಪುಣೆ(ಡಿ.18): ಡೆಲ್ಲಿ ಆರಂಭಿಕರಾದ ಗೌತಮ್ ಗಂಭೀರ್(127), ಕುನಾಲ್ ಚಂಡೀಲಾ(127) ಭರ್ಜರಿ ಶತಕ ಹಾಗೂ ಒಟ್ಟಾರೆ ದ್ವಿಶತಕದ(232) ಜತೆಯಾಟದ ನೆರವಿನಿಂದ ಡೆಲ್ಲಿ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಳಕ್ಕೆ ದಿಟ್ಟ ತಿರುಗೇಟು ನೀಡಿದ್ದು 3 ವಿಕೆಟ್ ನಷ್ಟಕ್ಕೆ 271 ರನ್ ಕಲೆಹಾಕಿದ್ದು, ಕೇವಲ 15 ರನ್'ಗಳ ಹಿನ್ನಡೆಯಲ್ಲಿದೆ.
ಮೊದಲ ಸೆಷನ್'ನಲ್ಲೇ ಬಂಗಾಳವನ್ನು ಆಲೌಟ್ ಮಾಡಿದ ಡೆಲ್ಲಿ, ಬಳಿಕ ಬ್ಯಾಟಿಂಗ್'ನಲ್ಲಿ ದಿಟ್ಟ ಪ್ರದರ್ಶನ ನೀಡಿತು. ಅನುಭವಿ ಎಡಗೈ ಬ್ಯಾಟ್ಸ್'ಮನ್ ಗಂಭೀರ್ ಹಾಗೂ ಚಂಡೀಲಾ ಬಂಗಾಳ ಬೌಲರ್'ಗಳನ್ನು ಮನ ಬಂದಂತೆ ದಂಡಿಸಿದರು. 113 ರನ್ ಸಿಡಿಸಿದ ಚಂಡೀಲಾ, ಅಮಿತ್'ಗೆ ವಿಕೆಟ್ ಒಪ್ಪಿಸಿರೆ, ಆ ಬಳಿಕ ದೃವ್ ಶೋರೈ ಕೇವಲ 12 ರನ್ ಬಾರಿಸಿ ಅಶೋಕ್ ದಿಂಡಾಗೆ ವಿಕೆಟ್ ಒಪ್ಪಿಸಿದರು. ದಿನದುದ್ದಕ್ಕೂ ಅಧಿಕಾರಯುತ ಬ್ಯಾಟಿಂಗ್ ನಡೆಸಿದ ಗಂಭೀರ್ 2ನೇ ದಿನದಾಟ ಮುಕ್ತಾಯಕ್ಕೆ ಕೆಲ ಓವರ್'ಗಳು ಬಾಕಿಯಿದ್ದಾಗ ಶಮಿಗೆ ವಿಕೆಟ್ ಒಪ್ಪಿಸಿದರು.
ಕೇವಲ 15 ರನ್'ಗಳ ಇನಿಂಗ್ಸ್ ಹಿನ್ನಡೆಯಲ್ಲಿರುವ ಡೆಲ್ಲಿ ಮೂರನೇ ದಿನ ಯಾವರೀತಿ ಬ್ಯಾಟಿಂಗ್ ನಡೆಸಲಿದೆ ಎಂದು ಕಾದು ಕಾದುನೋಡಬೇಕಿದೆ.
ಸಂಕ್ಷಿಪ್ತ ಸ್ಕೋರ್:
ಬಂಗಾಳ: 286/10
ಸುದಿಪ್: 83
ನವ್ದೀಪ್ ಶೈನಿ: 55/3
ಡೆಲ್ಲಿ: 271/3
ಗೌತಮ್ ಗಂಭೀರ್: 127
ಅಮಿತ್: 47/1
(*ಎರಡನೇ ದಿನದಂತ್ಯಕ್ಕೆ)
