ಮೊದಲ ಇನಿಂಗ್ಸ್'ನಲ್ಲಿ 398 ರನ್'ಗಳನ್ನು ಪೇರಿಸಿ 112 ರನ್'ಗಳ ಮುನ್ನಡೆಯನ್ನು ಬೆನ್ನತ್ತಿದ ಬಂಗಾಳ ತಂಡ ತನ್ನ 2ನೇ ಇನಿಂಗ್ಸ್'ನಲ್ಲಿ ನವದೀಪ್ ಸೈನಿ ಹಾಗೂ ಕುಲ್'ವಂತ್ ಕೇಜ್ರೋಲಿಯಾ ಅವರ ದಾಳಿಗೆ 86 ರನ್'ಗಳಿಗೆ ಸರ್ವ ಪತನ ಕಂಡಿತು.
ಪುಣೆ(ಡಿ.19): ಇನಿಂಗ್ಸ್ ಹಾಗೂ 26 ರನ್'ಗಳಿಂದ ಬಂಗಾಳ ತಂಡವನ್ನು ಬಗ್ಗು ಬಡಿದಿರುವ ದೆಹಲಿ ತಂಡದವರು ಈ ಸಾಲಿನ ರಣಜಿ ಟ್ರೋಫಿಯ ಫೈನಲ್ ತಲುಪಿದ್ದಾರೆ.
ದೆಹಲಿ ತಂಡ ಕುನಾಲ್ ಚಾಂಡಾಲಾ(113)ಗೌತಮ್ ಗಂಭೀರ್(127) ಅವರ ಶತಕ ಹಾಗೂ ಹಿಮ್ಮತ್ ಸಿಂಗ್(60) ಅವರ ಮೊದಲ ಇನಿಂಗ್ಸ್'ನಲ್ಲಿ 398 ರನ್'ಗಳನ್ನು ಪೇರಿಸಿ 112 ರನ್'ಗಳ ಮುನ್ನಡೆಯನ್ನು ಬೆನ್ನತ್ತಿದ ಬಂಗಾಳ ತಂಡ ತನ್ನ 2ನೇ ಇನಿಂಗ್ಸ್'ನಲ್ಲಿ ನವದೀಪ್ ಸೈನಿ ಹಾಗೂ ಕುಲ್'ವಂತ್ ಕೇಜ್ರೋಲಿಯಾ ಅವರ ದಾಳಿಗೆ 86 ರನ್'ಗಳಿಗೆ ಸರ್ವ ಪತನ ಕಂಡಿತು.
ಸುದೀಪ್ ಚಟರ್ಜಿ (21) ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರ್ಯಾರು 20ರ ಗಡಿ ದಾಟಲಿಲ್ಲ. ನವದೀಪ್ ಸೈನಿ 35/4 ಹಾಗೂ ಕುಲ್'ವಂತ್ ಕೇಜ್ರೋಲಿಯಾ 40/4 ವಿಕೇಟ್ ಪಡೆಯುವ ಮೂಲಕ ಬಂಗಾಳದ ಪಡೆಗೆ ಸೋಲಿನ ರುಚಿ ತೋರಿಸಿದರು.ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ವಿದರ್ಭ ತಂಡದ ಮತ್ತೊಂದು ಸೆಮಿಫೈನಲ್'ನಲ್ಲಿ ಯಾರು ವಿಜೇತರಾಗುತ್ತಾರೋ ಅವರು ಡಿ.29ರಂದು ಇಧೋರ್'ನಲ್ಲಿ ದೆಹಲಿ ಪಡೆಗೆ ಸವಾಲಾಗುತ್ತಾರೆ.
ಸ್ಕೋರ್
ಬಂಗಾಳ ಮೊದಲ ಇನಿಂಗ್ಸ್ 286 ಹಾಗೂ 86
(ನವ'ದೀಪ್ 35/4, ಕುಲ್'ವಂತ್ 40/4)
ದೆಹಲಿ ಮೊದಲ ಇನಿಂಗ್ಸ್ 398
(ಕುನಾಲ್ ಚಾಂಡಾಲಾ 113, ಗೌತಮ್ ಗಂಭೀರ್ 127 )
ದೆಹಲಿಗೆ ಇನಿಂಗ್ಸ್ ಹಾಗೂ 26 ರನ್'ಗಳ ಜಯ
ಫೈನಲ್ ಪಂದ್ಯ ಡಿ.29ರಂದು ಇಂಧೂರ್'ನಲ್ಲಿ
--
