ಸಿಎಸ್’ಕೆಗೆ ಸೋಲಿನ ರುಚಿ ತೋರಿಸಿದ ಡೆವಿಲ್ಸ್

Delhi Daredevils won by 34 runs
Highlights

ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ ಡೇರ್’ಡೆವಿಲ್ಸ್ ಬಲಿಷ್ಠ ಚೆನ್ನೈ ಸೂಪರ್’ಕಿಂಗ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸಿತು. ಡೆಲ್ಲಿ ತವರಿನಲ್ಲಿ 34 ರನ್’ಗಳ ಭರ್ಜರಿ ಜಯ ದಾಖಲಿಸಿತು.

ನವದೆಹಲಿ[ಮೇ.18]: ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ ಡೇರ್’ಡೆವಿಲ್ಸ್ ಬಲಿಷ್ಠ ಚೆನ್ನೈ ಸೂಪರ್’ಕಿಂಗ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸಿತು. ಡೆಲ್ಲಿ ತವರಿನಲ್ಲಿ 34 ರನ್’ಗಳ ಭರ್ಜರಿ ಜಯ ದಾಖಲಿಸಿತು.
ಡೆಲ್ಲಿ ನೀಡಿದ್ದ 163 ರನ್ ಗುರಿ ಬೆನ್ನತ್ತಿದ ಸಿಎಸ್’ಕೆ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್’ಗೆ ಶೇನ್ ವಾಟ್ಸನ್-ಅಂಬಟಿ ರಾಯುಡು 46 ರನ್ ಕಲೆಹಾಕಿದರು. ವಾಟ್ಸನ್ 14 ರನ್ ಬಾರಿಸಿ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ರೈನಾ ಆಟ ಕೇವಲ 15 ರನ್’ಗೆ ಸೀಮಿತವಾದರೆ, ಧೋನಿ 17 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಸ್ಯಾಮ್ ಬಿಲ್ಲಿಂಗ್ಸ್, ಡ್ವೇನ್ ಬ್ರಾವೋ ತಲಾ ಒಂದೊಂದು ರನ್ ಬಾರಿಸಿ ನಿರಾಸೆ ಮೂಡಿಸಿದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಅಂಬಟಿ ರಾಯುಡು 50 ರನ್ ಬಾರಿಸಿ ಹರ್ಷಲ್ ಪಟೇಲ್’ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಸಿಎಸ್’ಕೆ 6 ವಿಕೆಟ್ ಕಳೆದುಕೊಂಡು 128 ರನ್’ಗಳಿಸಲಷ್ಟೇ ಶಕ್ತವಾಯಿತು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್’ಡೆವಿಲ್ಸ್ 162 ರನ್ ಬಾರಿಸಿತ್ತು.
 DD: 162/5
ರಿಶಭ್ ಪಂತ್: 38
ಎನ್ಜಿಡಿ: 14/2

CSK: 128/6

ಅಂಬಟಿ ರಾಯುಡು: 50

ಅಮಿತ್ ಮಿಶ್ರಾ: 20/2

loader