ರಿಶಬ್ ಪಂತ್ ಸ್ಫೋಟಕ ಶತಕ : ಹೈದರಾಬಾದ್'ಗೆ ಸವಾಲಿನ ಗುರಿ

Delhi Daredevils to a total of 187
Highlights

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ತಂಡಕ್ಕೆ ಶಕೀಬ್ ಅಲ್ ಹಸನ್ ಆರಂಭದಲ್ಲೇ  ಷಾ ಹಾಗೂ ರಾಯ್ ಅವರನ್ನು ಔಟ್ ಮಾಡುವ ಮೂಲಕ ಶಾಕ್ ನೀಡಿದರು. ನಾಯಕ ಅಯ್ಯರ್ ಕೂಡ ರನ್ ಔಟ್ ಆದರು.  ಒಂದು ಕಡೆ ವಿಕೇಟ್ ಬೀಳುತ್ತಿದ್ದರೂ ಏಕಾಂಗಿಯಾಗಿ ಸ್ಫೋಟಕ ಆಟವಾಡಿದ ವಿಕೇಟ್ ಕೀಪರ್ ರಿಶಬ್ ಪಂತ್  ಸಿಕ್ಸ್, ಫೋರ್'ಗಳ ಸುರಿಮಳೆಗೆರೆದರು.

ನವದೆಹಲಿ(ಮೇ.10): ಸತತ ಸೋಲುಗಳನ್ನು ಕಾಣುತ್ತಿರುವ ಡೆಲ್ಲಿ ಡೇರ್ ಡೇವಿಲ್ಸ್  ತಂಡ ವಿಕೇಟ್ ಕೀಪರ್ ರಿಶಬ್ ಪಂತ್ ಅವರ ಸ್ಫೋಟಕ ಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 188 ರನ್ ಸವಾಲಿನ ಗುರಿ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ತಂಡಕ್ಕೆ ಶಕೀಬ್ ಅಲ್ ಹಸನ್ ಆರಂಭದಲ್ಲೇ  ಷಾ ಹಾಗೂ ರಾಯ್ ಅವರನ್ನು ಔಟ್ ಮಾಡುವ ಮೂಲಕ ಶಾಕ್ ನೀಡಿದರು. ನಾಯಕ ಅಯ್ಯರ್ ಕೂಡ ರನ್ ಔಟ್ ಆದರು.  ಒಂದು ಕಡೆ ವಿಕೇಟ್ ಬೀಳುತ್ತಿದ್ದರೂ ಏಕಾಂಗಿಯಾಗಿ ಸ್ಫೋಟಕ ಆಟವಾಡಿದ ವಿಕೇಟ್ ಕೀಪರ್ ರಿಶಬ್ ಪಂತ್  ಸಿಕ್ಸ್, ಫೋರ್'ಗಳ ಸುರಿಮಳೆಗೆರೆದರು. 63 ಚಂಡುಗಳ 128 ರನ್'ಗಳ ಅವರ ಅಜೇಯ ಆಟದಲ್ಲಿ 15 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸ್'ರ್ ಗಳಿದ್ದವು. ಅಂತಿಮವಾಗಿ ಡೆಲ್ಲಿ ತಂಡ 20 ಓವರ್'ಗಳಲ್ಲಿ 187 ರನ್ ಪೇರಿಸಿದರು. 


ಸ್ಕೋರ್ 
ಡೆಲ್ಲಿ ಡೇರ್'ಡೇವಿಲ್ಸ್ 20 ಓವರ್'ಗಳಲ್ಲಿ 187/5
(ರಿಶಬ್ ಪಂತ್  ಅಜೇಯ 128, ಶಕೀಬ್ 27/2)

ಹೈದರಾಬಾದ್ ವಿರುದ್ಧದ ಪಂದ್ಯ
(ವಿವರ ಅಪೂರ್ಣ)

loader