ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿ ಮಹತ್ತರ ಬದಲಾವಣೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Sep 2018, 8:29 PM IST
Delhi Daredevils completely change their gesture for next ipl
Highlights

ಮುಂದಿನ ಐಪಿಎಲ್‌ ಟೂರ್ನಿಗೆ ಡೆಲ್ಲಿ ಡೇರ್‌ಡೆವಿಲ್ಸ್ ತಂಡ  ಸಂಪೂರ್ಣವಾಗಿ ಬದಲಾಗಲಿದೆ. ಪ್ರಶಸ್ತಿ ಕೊರಗನ್ನ ನೀಗಿಸಲು ಡೆಲ್ಲಿ ತಂಡ ಈಗಿನಿಂದಲೇ ಕಸರತ್ತು ಆರಂಭಿಸಿದೆ. ಇಲ್ಲಿದೆ ಡೆಲ್ಲಿ ತಂಡದ ಹೊಸ ಬದಲಾವಣೆ ವಿವರ.

ದೆಹಲಿ(ಸೆ.01): ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ದಿಗ್ಗಜ ಕ್ರಿಕೆಟಿಗರನ್ನೇ ಕರೆ ತಂದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ 2019ರ ಐಪಿಎಲ್ ಟೂರ್ನಿಗೆ ತಂಡದಲ್ಲಿ ಮಹತ್ತರ ಬದಲಾವಣೆ ಮಾಡಲು ಫ್ರಾಂಚೈಸಿ ನಿರ್ಧರಿಸಿದೆ.

ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಹೆಸರು ಬದಲಾಯಿಸಲು ಫ್ರಾಂಚೈಸಿ ಮುಂದಾಗಿದೆ. ಡೇವಿಲ್ಸ್ ಹೆಸರು ಇಲ್ಲೀವರೆಗೂ ಡೆಲ್ಲಿ ತಂಡಕ್ಕೆ ವರದಾನವಾಗಿಲ್ಲ. ಜೊತೆಗೆ ಹೆಸರಿಗೆ ತಕ್ಕಂತೆ ಡೆಲ್ಲಿ ತಂಡ ಆಟವಾಡಿಲ್ಲ. ಹೀಗಾಗಿ ಡೇರ್‌ಡೆವಿಲ್ಸ್  ಹೆಸರು ಬದಲಿಸಲು ನಿರ್ಧರಿಸಿದೆ.

ಡೆಲ್ಲಿ ತಂಡ ಪ್ರತಿ ಸರಣಿಗೂ ಜರ್ಸಿ ಬಣ್ಣ ಹಾಗೂ ವಿನ್ಯಾಸದಲ್ಲಿ ಹಲವು ಬದಲಾವಣೆ ಮಾಡಿಕೊಂಡಿದೆ. ಇದೀಗ 2019ರ ಐಪಿಎಲ್ ಟೂರ್ನಿಗೆ ತಮ್ಮ ಜರ್ಸಿಯಲ್ಲೂ ಮಹತ್ತರ ಬದಲಾವಣೆ ಮಾಡಲು ನಿರ್ಧರಿಸಿದೆ.  ಲಕ್ಕಿ ಕಲರ್‌ ಮೂಲಕ ಕಣಕ್ಕಿಳಿಯಲು ಡಿಡಿ ನಿರ್ಧರಿಸಿದೆ.

ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಆಟಗಾರರ ಆಯ್ಕೆ ತರಬೇತಿ ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನ ಆಸ್ಟೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ಗೆ ನೀಡಲು ಫ್ರಾಂಚೈಸಿ ನಿರ್ಧರಿಸಿದೆ. ಈ ಮೂಲಕ ಪಾಂಟಿಂಗ್ ಮಾರ್ಗದರ್ಶನದಲ್ಲಿ ಡೆಲ್ಲಿ ತಂಡ 2019ರ ಐಪಿಎಲ್ ಟೂರ್ನಿಯಲ್ಲಿ ಮುಂದುವರಿಯಲಿದೆ.

ಕಳೆದ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಹರ್ಭಜ್ ಸಿಂಗ್ ಇದೀಗ ಡೆಲ್ಲಿ ತಂಡದ ಮೆಂಟರ್ ಜವಾಬ್ದಾರಿ ವಹಿಸೋ ಸಾಧ್ಯತೆ ಇದೆ. ಈಗಾಗಲೇ ಡೆಲ್ಲಿ ಫ್ರಾಂಚೈಸಿ ಹರ್ಭಜನ್ ಜೊತೆ ಮಾಕುತೆ ನಡೆಸಿದೆ. 11 ಆವೃತ್ತಿಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಹೀಗಾಗಿ 12ನೇ ಆವೃತ್ತಿಗೆ ಹೆಸರು ಸೇರಿದಂತೆ ಹಲವು ಬದಲಾವಣೆಯೊಂದಿಗೆ ಡೆಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ.

loader