ನವದೆಹಲಿ[ಮೇ.10]: ಡೆಲ್ಲಿ ಡೇರ್ ಡೆವಿಲ್ಸ್ ತಂಡ ಅಂಗಾಂಗ ದಾನದ ಪ್ರತಿಜ್ಞೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅಂಗಾಂಗ ದಾನದ ಮಹತ್ವ ಸಾರಲು ಮುಂದಾಗಿದೆ. 

ಇಲ್ಲಿನ ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿದ ಗಂಭೀರ್, ಶಮಿ ಮತ್ತು ಪೃಥ್ವಿ ಶಾ ಅವರನ್ನೊಳಗೊಂಡ ಡೆಲ್ಲಿ ತಂಡ, ಅಂಗಾಂಗ ದಾನ ಮಾಡುವುದಾಗಿ ಭರವಸೆ ನೀಡಿದೆ. 

ಪ್ರತಿಯೊಬ್ಬರು ಅಂಗಾಂಗ ದಾನ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ನಾನು ಕೂಡಾ ಅಂಗಾಂಗ ದಾನ ಮಾಡುತ್ತೇನೆ. ಅಂಗಾಂಗ ದಾನ ಮಾಡುವುದರಿಂದ ಬೇರೆಯವರಿಗೆ ಅನುವಾಗುವುದಾದರೆ ಅದಕ್ಕಿಂತ ಸಂತೋಷವಾಗುವ ವಿಚಾರ ಮತ್ತೊಂದು ಇಲ್ಲ ಎಂದು ಗಂಭೀರ್ ಹೇಳಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್’ನಲ್ಲಿ ನೀರಸ ಪ್ರದರ್ಶನದೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ, ಡೆಲ್ಲಿ ಡೇರ್’ಡೆವಿಲ್ಸ್ ತಂಡದ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.