ಫಿನ್‌ಲೆಂಡ್‌ನಲ್ಲಿ ನಡೆದ ವಿಶ್ವ ಅಂಜರ್ 20 ಅಥ್ಲೆಟಿತ್ ಕೂಟದ 400 ಮೀಟರ್ ರೇಸ್‌ನಲ್ಲಿ ಭಾರತದ ಹಿಮಾ ದಾಸ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಹಿಮಾ ದಾಸ್ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಮೋದಿ ಟ್ವೀಟ್ ಮೂಲಕ ಹೇಳಿದ್ದೇನು? ಇಲ್ಲಿದೆ

ನವದೆಹಲಿ(ಜು.14): ಐಎಎಎಫ್ ವರ್ಲ್ಡ್ ಅಂಡರ್ 20 ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಹಿಮಾ ದಾಸ್ ಚಿನ್ನದ ಪದಕ ಗೆದ್ದು ವಿಶ್ವಮಟ್ಟದಲ್ಲಿ ಭಾರತ ಕೀರ್ತಿ ಪತಾಕೆ ಹಾರಿಸಿದ್ದಾರೆ. ಹಿಮಾ ದಾಸ್ ಚಿನ್ನದ ಪದ ಗೆದ್ದು ಭಾವುಕರಾದ ಕ್ಷಣಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

400 ಮೀಟರ್ ಓಟದಲ್ಲಿ ಹಿಮಾ ದಾಸ್ ಪ್ರಬಲ ಸ್ಪರ್ಧಿಗಳಾದ ರೊಮೆನಿಯಾದ ಆಂಡ್ರೆ ಮಿಕ್ಲೋಸ್ ಹಾಗೂ ಅಮೇರಿಕಾದ ಟೈಲರ್ ಮ್ಯಾನ್ಸನ್ ಅವರನ್ನ ಹಿಂದಿಕ್ಕಿ ಚಿನ್ನದ ಪದಕ ಗೆದ್ದರು. ಬಳಿಕ ಪದಕ ಪ್ರಧಾನದ ವೇಳೆ ರಾಷ್ಟ್ರಗೀತೆ ಮೊಳಗಿದಾಗ ಹಿಮಾದಾಸ್ ಭಾವುಕರಾದರು. ಈ ಕ್ಷಣಗಳ ವಿಡೀಯೋವನ್ನ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Scroll to load tweet…

ಹಿಮಾ ದಾಸ್ ಚಿನ್ನದ ಪದಕ ಗೆದ್ದ ತಕ್ಷಣ ಭಾರತದ ಧ್ವಜಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ರಾಷ್ಟ್ರಗೀತೆ ವೇಳೆ ಕಣ್ಣೀಟ್ಟಿದ್ದು ನನ್ನ ಮನಸ್ಸು ತಟ್ಟಿದೆ. ಪ್ರತಿಯೊಬ್ಬ ಭಾರತೀಯನಿಗೂ ಈ ದೃಶ್ಯ ಕಣ್ಣೀರು ತರಿಸುತ್ತೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಪ್ರಸಕ್ತ ವರ್ಷದ ಆರಂಭದಲ್ಲಿ ನಡೆದ ಗೋಲ್ಡ್ ಕೊಸ್ಟ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹಿಮಾ ದಾಸ್ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಕಠಿಣ ಅಭ್ಯಾಸದಿಂದ ಅಷ್ಟೇ ವೇಗದಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.