2013ರ ಐಪಿಎಲ್ ಆವೃತ್ತಿ ವೇಳೆ ಸಿಎಸ್'ಕೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರು ಬೆಟ್ಟಿಂಗ್ ನಡೆಸಿದ್ದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ 2015ರಲ್ಲಿ ಎರಡೂ ತಂಡಗಳನ್ನು 2 ವರ್ಷಗಳ ಕಾಲ ಐಪಿಎಲ್ ಟೂರ್ನಿಯಿಂದ ಹೊರಗಿಡಲಾಗಿತ್ತು.
ಮುಂಬೈ(ಜು.15): ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮೇಲೆ ವಿಧಿಸಿದ್ದ 2 ವರ್ಷಗಳ ನಿಷೇಧ ಜು.13ರಂದು ಅಧಿಕೃತವಾಗಿ ಅಂತ್ಯಗೊಂಡಿದ್ದು, ಎರಡೂ ತಂಡಗಳು ಮುಂದಿನ ವರ್ಷದಿಂದ ಐಪಿಎಲ್ ಆಡಲು ತುದಿಗಾಲಿನಲ್ಲಿ ನಿಂತಿವೆ.
ತಂಡಗಳ ಮೇಲೆ ವಿಧಿಸಿದ್ದ ನಿಷೇಧ ಅಂತ್ಯಗೊಂಡಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ವಿಷಯವನ್ನು ಪ್ರಚಾರಗೊಳಿಸುವ ಕ್ರಿಯೆಗೆ ಚಾಲನೆ ನೀಡಲಾಗುವುದು. ಒಂದೊಮ್ಮೆ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದರೆ, ನಾವು ಖಂಡಿತವಾಗಿಯೂ ನಮ್ಮ ನಾಯಕ ಎಂ.ಎಸ್ ಧೋನಿಯನ್ನು ತಂಡಕ್ಕೆ ಸೇರಿಸಿಕೊಳ್ಳುತ್ತೇವೆ. ಈ ಕುರಿತು ಧೋನಿಯೊಂದಿಗೆ ಚರ್ಚೆ ನಡೆಸಿಲ್ಲ ಎಂದು ಸಿಎಸ್'ಕೆ ಕ್ರಿಕೆಟ್ ಲಿಮಿಟೆಡ್'ನ ನಿರ್ದೇಶಕರಲ್ಲೊಬ್ಬರಾದ ಕೆ. ಜಾರ್ಜ್ ತಿಳಿಸಿದ್ದಾರೆ.
2013ರ ಐಪಿಎಲ್ ಆವೃತ್ತಿ ವೇಳೆ ಸಿಎಸ್'ಕೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರು ಬೆಟ್ಟಿಂಗ್ ನಡೆಸಿದ್ದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ 2015ರಲ್ಲಿ ಎರಡೂ ತಂಡಗಳನ್ನು 2 ವರ್ಷಗಳ ಕಾಲ ಐಪಿಎಲ್ ಟೂರ್ನಿಯಿಂದ ಹೊರಗಿಡಲಾಗಿತ್ತು.