ಫಾಫ್ ಡ್ಯು ಪ್ಲೆಸಿಸ್ ವಿಶ್ರಾಂತಿ ಬಯಸಿದ್ದಾರೆ. ಡ್ಯು ಪ್ಲೆಸಿಸ್ ಗೈರು ಹಾಜರಿಯಲ್ಲಿ ಡಿವಿಲಿಯರ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. 

ಜೋಹಾನ್ಸ್‌'ಬರ್ಗ್‌(ಜೂ.14): ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದ ಬಳಿಕ ಎಬಿ ಡಿವಿಲಿಯರ್ಸ್ ನಾಯಕತ್ವದ ಕುರಿತು ಪ್ರಶ್ನೆಗಳೇಳುತ್ತಿರುವುದರ ಬೆನ್ನಲ್ಲೇ, ಇದೇ ಜೂನ್‌ 21 ರಿಂದ 25ರವರೆಗೆ ಇಂಗ್ಲೆಂಡ್‌ ವಿರುದ್ಧದ 3 ಟಿ20 ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿ ಡಿವಿಲಿಯರ್ಸ್‌ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ.

ಕಳೆದ ವರ್ಷವಷ್ಟೇ ಡಿವಿಲಿ­ಯರ್ಸ್‌ ಟೆಸ್ಟ್‌ ನಾಯಕ ಸ್ಥಾನ ತೊರೆದಿದ್ದರು. ಸೀಮಿತ ಓವರ್‌'ಗಳ ತಂಡದ ನಾಯಕ ಫಾಫ್‌ ಡು ಪ್ಲೆಸಿಸ್ ಭುಜದ ನೋವಿಗೆ ತುತ್ತಾಗಿದ್ದಾರೆ. ಅಲ್ಲದೇ ಅವರ ಪತ್ನಿ ಇಮಾರಿ ಮೊದಲ ಮಗು­ವಿಗೆ ಜನ್ಮ ನೀಡಿದ್ದಾರೆ.

ಹೀಗಾಗಿ ಫಾಫ್ ಡ್ಯು ಪ್ಲೆಸಿಸ್ ವಿಶ್ರಾಂತಿ ಬಯಸಿದ್ದಾರೆ. ಡ್ಯು ಪ್ಲೆಸಿಸ್ ಗೈರು ಹಾಜರಿಯಲ್ಲಿ ಡಿವಿಲಿಯರ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. 

ಇನ್ನು ಅನುಭವಿ ಆಟಗಾರರಾದ ಹಾಶೀಂ ಆಮ್ಲಾ, ಜೆ.ಪಿ ಡುಮಿನಿ, ಕ್ವಿಂಟಾನ್ 'ಡಿ'ಕಾಕ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.