ಕುತೂಹಲ ಹೆಚ್ಚಿಸಲಿದೆ ಕೊನೆಯ 3 ಒನ್'ಡೇಗಳು...! ಯಾಕೆ ಗೊತ್ತಾ..?

First Published 9, Feb 2018, 7:19 PM IST
De Villiers returns for final three ODIs
Highlights

ಈಗಾಗಲೇ ಕೇವಲ 3 ಪಂದ್ಯಗಳಲ್ಲಿ ಭಾರತದ ಸ್ಟಾರ್ ಸ್ಪಿನ್'ದ್ವಯರಾದ ಚಾಹಲ್ ಹಾಗೂ ಕುಲ್ದೀಪ್ 21 ವಿಕೆಟ್ ಕಬಳಿಸಿದ್ದು, ಈ ಜೋಡಿಯನ್ನು ಎಬಿಡಿ ಹೇಗೆ ಎದುರಿಸುತ್ತಾರೆ ಎಂದು ಕಾದುನೋಡಬೇಕಿದೆ. ಸಮಕಾಲಿನ ದಿಗ್ಗಜ ಬ್ಯಾಟ್ಸ್'ಮನ್'ಗಳಾದ ಕೊಹ್ಲಿ ಹಾಗೂ ಆರ್'ಸಿಬಿ ತಂಡದ ಮತ್ತೋರ್ವ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಮುಖಾಮುಖಿಯಾಗುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಜೊಹಾನ್ಸ್'ಬರ್ಗ್(ಫೆ.09): ಭಾರತ ವಿರುದ್ಧ ಅಂತಿಮ 3 ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ತಂಡವನ್ನು ಕೂಡಿಕೊಂಡಿದ್ದಾರೆ. ಕೈಬೆರಳಿನ ಗಾಯದ ಸಮಸ್ಯೆಯಿಂದಾಗಿ ಮೊದಲ 3 ಪಂದ್ಯಗಳಿಂದ ಹೊರಗುಳಿದಿದ್ದ ಎಬಿಡಿ ವಾಂಡರರ್ಸ್'ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಈಗಾಗಲೇ ಸರಣಿಯಲ್ಲಿ 3-0 ಹಿನ್ನಡೆ ಅನುಭವಿಸಿರುವ ಆಫ್ರಿಕಾಗೆ ಎಬಿಡಿ ಆಗಮನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಈಗಾಗಲೇ ಕೇವಲ 3 ಪಂದ್ಯಗಳಲ್ಲಿ ಭಾರತದ ಸ್ಟಾರ್ ಸ್ಪಿನ್'ದ್ವಯರಾದ ಚಾಹಲ್ ಹಾಗೂ ಕುಲ್ದೀಪ್ 21 ವಿಕೆಟ್ ಕಬಳಿಸಿದ್ದು, ಈ ಜೋಡಿಯನ್ನು ಎಬಿಡಿ ಹೇಗೆ ಎದುರಿಸುತ್ತಾರೆ ಎಂದು ಕಾದುನೋಡಬೇಕಿದೆ. ಸಮಕಾಲಿನ ದಿಗ್ಗಜ ಬ್ಯಾಟ್ಸ್'ಮನ್'ಗಳಾದ ಕೊಹ್ಲಿ ಹಾಗೂ ಆರ್'ಸಿಬಿ ತಂಡದ ಮತ್ತೋರ್ವ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಮುಖಾಮುಖಿಯಾಗುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಎಬಿಡಿ ಹೊರತುಪಡಿಸಿ ಮತ್ಯಾವುದೇ ಬದಲಾವಣೆಯನ್ನು ದಕ್ಷಿಣ ಆಫ್ರಿಕಾ ತಂಡ ಮಾಡಿಲ್ಲ. ಹಿರಿಯ ಆಟಗಾರರಾದ ಹಾಶೀಂ ಆಮ್ಲಾ, ಮಾರ್ನೆ ಮಾರ್ಕೆಲ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದು, ಗಾಯದ ಸಮಸ್ಯಯಿಂದಾಗಿ ಡಿಕಾಕ್ ಹಾಗೂ ಡುಪ್ಲೆಸಿಸ್ ತಂಡದಿಂದ ಹೊರಗುಳಿದಿದ್ದಾರೆ. ಹಂಗಾಮಿ ನಾಯಕನಾಗಿ ಏಡನ್ ಮಾರ್ಕ್'ರಮ್ ಮುಂದುವರೆದಿದ್ದಾರೆ.

loader