Asianet Suvarna News Asianet Suvarna News

ಭುವಿ ದಾಳಿಗೆ ಕುಸಿದ ಹರಿಣಿಗಳು,ಸಾಧಾರಣ ಮೊತ್ತ ಪೇರಿಸಿದ ದ.ಆಫ್ರಿಕಾ: ಭಾರತಕ್ಕೂ ಆರಂಭಿಕ ಆಘಾತ

ವಿಕೇಟ್ ಕೀಪರ್ ಡಿಕಾಕ್ ಏಕದಿನ ಶೈಲಿಯಲ್ಲಿ ಒಂದಷ್ಟು ಹೊತ್ತು ಬ್ಯಾಟ್ ಬೀಸಿ(43: 40 ಎಸೆತ 7 ಬೌಂಡರಿ) ಭುವಿ ಎಸತದಲ್ಲೇ ಔಟಾದರು. ಫಿಲೆಂಡರ್(23), ಮಹರಾಜ್(35) ರಬಡಾ(26) ಹಾಗೂ ಸ್ಟೈನ್(16) ಒಂಚೂರು ಭರವಸೆ ಮೂಡಿಸಿ ತಂಡದ ಮೊತ್ತವನ್ನು 280ರ ಗಡಿ ದಾಟಿಸಿದರು.

ಭಾರತದ ಪರ ಭುವಿ 87/4, ಆರ್. ಆಶ್ವಿನ್ 21/2,ಶಮಿ,ಬುಮ್ರಾ, ಪಾಂಡ್ಯ ತಲಾ ಒಂದೊಂದು ವಿಕೇಟ್ ಕಬಳಿಸಿ ದಕ್ಷಿಣ ಆಫ್ರಿಕಾ ತಂಡವನ್ನು 73.1 ಓವರ್'ಗಳಲ್ಲಿ 286 ರನ್'ಗಳಿಗೆ ನಿಯಂತ್ರಿಸಿದರು.

De Villiers du Plessis fifties give South Africa 286

ಕೇಪ್ಟೌನ್(ಜ.05): ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್'ನ ಮೊದಲ ದಿನವೇ ಯಶಸ್ಸು ಸಾಧಿಸಿದೆ. ವೇಗಿ ಭುವನೇಶ್ವರ್ ಕುಮಾರ್ ದಾಳಿಗೆ ಕುಸಿದ ಎದುರಾಳಿ ತಂಡ ಮೊದಲ ಇನಿಂಗ್ಸ್'ನಲ್ಲಿ 286 ರನ್'ಗಳಿಗೆ ಆಲ್ ಔಟ್ ಆಗಿದೆ.

ಕೇಪ್'ಟೌನ್'ನಲ್ಲಿ ನ್ಯೂ'ಲ್ಯಾಂಡ್ಸ್ ಮೈದಾನದಲ್ಲಿ ಟಾಸ್ ಗೆದ್ದ ಆರಂಭಿಸಿದ ಅತಿಥೇಯ ತಂಡದ ನಾಯಕ ಡುಪ್ಲೆಸೀಸ್ ಪಡೆ ಮೊದಲ ಓವರ್'ನ ಮೂರನೇ ಎಸತದಲ್ಲಿ ಭುವಿ ಬೌಲಿಂಗ್'ನಲ್ಲಿ ಭುವಿ ಅವರನ್ನು ಕಳೆದುಕೊಂಡಿತು.

ಮೂರನೇ ಓವರ್'ನ ಕೊನೆಯ ಎಸೆತದಲ್ಲಿ ಮತ್ತೊಬ್ಬ ಆರಂಭಿಕ ಆಟಗಾರ ಮಾರ್ಕ್ರಾಮ್(5) ಅವರನ್ನು ಭುವಿ ಎಲ್'ಬಿ ಬಲೆಗೆ ಕೆಡವಿದರು. ಮೊದಲ ಕ್ರಮಾಂಕದಲ್ಲಿ ಆಗಮಿಸಿದ ಸ್ಫೋಟಕ ಆಟಗಾರ ಅಶೀಮ್ ಆಮ್ಲ(3) ಕೂಡ ಭುವನೇಶ್ವರ್ ಆಕ್ರಮಣದ ಮುಂದೆ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅವರು ಕೂಡ ಸಾಹಗೆ ಕ್ಯಾಚಿತ್ತು ಔಟಾದರು. 12 ರನ್'ಗಳಲ್ಲಿಯೇ ದಕ್ಷಿಣ ಆಫ್ರಿಕಾ 3 ವಿಕೇಟ್ ಕಳೆದುಕೊಂಡಿತು.

ಎಬಿಡಿ, ಡುಪ್ಲೆಸೀಸ್ ಶತಕದ ಜೊತೆಯಾಟ   

3 ವಿಕೇಟ್ ಕಳೆದುಕೊಂಡ ನಂತರ ಸ್ಫೋಟಕ ಬ್ಯಾಟ್ಸ್'ಮೆನ್ ಎಬಿ ಡಿವಿಲಿಯರ್ಸ್ ಹಾಗೂ ನಾಯಕ ಡುಪ್ಲೆಸೀಸ್ ಶತಕದ ಜೊತೆಯಾಟದ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಎಬಿಡಿ ಬ್ಯಾಟ್ ಬೀಸುತ್ತಾ ಆಟವಾಡಿದರೆ ಡುಪ್ಲೆಸೀಸ್ ಸಮಾಧಾನಕರವಾಗಿ ಬ್ಯಾಟ್ ಆಟವಾಡ ತೊಡಗಿದರು. ಇವರಿಬ್ಬರು 4ನೇ ವಿಕೆಟ್'ಗೆ 126 ರನ್ ಕಲೆ ಹಾಕಿದರು.

ಎಬಿಡಿ ಅರ್ಧ ಶತಕ (65:84 ಎಸೆತ, 11 ಬೌಂಡರಿ) ದಾಖಲಿಸಿದ ನಂತರ  ಮೊದಲ ಟೆಸ್ಟ್ ಆಡಿದ ಬುಮ್ರಾ'ಗೆ ಬೌಲ್ಡ್ ಆದರು. ಇದರ ಬೆನ್ನಲ್ಲೆ ಪ್ಲೆಸೀಸ್ ಕೂಡ 62(104 ಎಸೆತ, 12 ಬೌಂಡರಿ) ರನ್ ಗಳಿಸಿದ ನಂತರ ಪಾಂಡ್ಯ ಬೌಲಿಂಗ್'ನಲ್ಲಿ ಸಾಹಗೆ ಕ್ಯಾಚಿತ್ತು ಪೆವಿಲಿಯನ್'ಗೆ ತೆರಳಿದರು.

ವಿಕೇಟ್ ಕೀಪರ್ ಡಿಕಾಕ್ ಏಕದಿನ ಶೈಲಿಯಲ್ಲಿ ಒಂದಷ್ಟು ಹೊತ್ತು ಬ್ಯಾಟ್ ಬೀಸಿ(43: 40 ಎಸೆತ 7 ಬೌಂಡರಿ) ಭುವಿ ಎಸತದಲ್ಲೇ ಔಟಾದರು. ಫಿಲೆಂಡರ್(23), ಮಹರಾಜ್(35) ರಬಡಾ(26) ಹಾಗೂ ಸ್ಟೈನ್(16) ಒಂಚೂರು ಭರವಸೆ ಮೂಡಿಸಿ ತಂಡದ ಮೊತ್ತವನ್ನು 280ರ ಗಡಿ ದಾಟಿಸಿದರು.

ಭಾರತದ ಪರ ಭುವಿ 87/4, ಆರ್. ಆಶ್ವಿನ್ 21/2,ಶಮಿ,ಬುಮ್ರಾ, ಪಾಂಡ್ಯ ತಲಾ ಒಂದೊಂದು ವಿಕೇಟ್ ಕಬಳಿಸಿ ದಕ್ಷಿಣ ಆಫ್ರಿಕಾ ತಂಡವನ್ನು 73.1 ಓವರ್'ಗಳಲ್ಲಿ 286 ರನ್'ಗಳಿಗೆ ನಿಯಂತ್ರಿಸಿದರು.

ಕೊಹ್ಲಿ ವಿಫಲ, ಭಾರತಕ್ಕೆ ಆರಂಭಿಕ ಆಘಾತ

ಸಾಧಾರಣ ಗುರಿ ಬೆನ್ನತ್ತಿರುವ ವಿರಾಟ್ ಕೊಹ್ಲಿ ಪಡೆ ಆರಂಭಿಕ ಆಘಾತ ಅನುಭವಿಸಿದ್ದಾರೆ. 11 ಓವರ್ ಆಗುವಷ್ಟರಲ್ಲಿಯೇ ಕೇವಲ 28 ರನ್'ಗಳಿಗೆ ಟೀಂ ಇಂಡಿಯಾದ 3 ಪ್ರಮುಖ ವಿಕೆಟ್'ಗಳು ಪತನವಾಗಿವೆ. ಮುರಳಿ ವಿಜಯ್ (1), ಶಿಖರ್ ಧವನ್(16) ಹಾಗೂ ಭರವಸೆಯ ಆಟಗಾರ ವಿರಾಟ್ ಕೊಹ್ಲಿ(5) ರನ್'ಗಳಿಗೆ ಔಟಾಗಿದ್ದು ಭಾರತ ತಂಡ ಒತ್ತಡದ ಪರಿಸ್ಥಿತಿಯಲ್ಲಿದೆ.

ಸ್ಕೋರ್

ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 73.1 ಓವರ್'ಗಳಲ್ಲಿ 286

(ಎಬಿಡಿ 65, ಡುಪ್ಲೆಸೀಸ್ 62, ಭುವಿ 87/4)

ಭಾರತ ಮೊದಲ ಇನಿಂಗ್ಸ್ 11 ಓವರ್'ಗಳಲ್ಲಿ 28/3

Latest Videos
Follow Us:
Download App:
  • android
  • ios