Asianet Suvarna News Asianet Suvarna News

ವಿಶ್ವ ಅಥ್ಲೆಟಿಕ್ಸ್: ಇತಿಹಾಸ ನಿರ್ಮಿಸಿದ ದವೀಂದರ್ ಸಿಂಗ್

ನೀರಜ್ ಚೋಪ್ರಾ ಜೂನಿಯರ್ ಚಾಂಪಿಯನ್'ಶಿಪ್'ನಲ್ಲಿ 86.48 ಮೀಟರ್ ದೂರ ಎಸೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಅಲ್ಲದೇ ಪ್ರಸಕ್ತ ಋತುವಿನಲ್ಲಿ ನೀರಜ್ 85.63 ಮೀಟರ್ ದೂರ ಎಸೆದಿದ್ದರು. ವಿಶ್ವ ಅಥ್ಲೇಟಿಕ್ಸ್ ಫೈನಲ್'ಗೇರಲು 83 ಮೀಟರ್ ದೂರ ಎಸೆಯಬೇಕಿತ್ತು. ಆದರೆ ಚೋಪ್ರಾ ಕೇವಲ 82.26 ಮೀಟರ್ ದೂರ ಎಸೆಯಲಷ್ಟೇ ಶಕ್ತರಾದರು.

Davinder Singh Becomes 1st Indian To Qualify For Javelin Finals Neeraj Chopra Out

ಲಂಡನ್(ಆ.11): ಭಾರತದ ಅನುಭವಿ ಜಾವಲಿನ್ ಪಟು ದವೀಂದರ್ ಸಿಂಗ್ ಕಾಂಗಾ, ವಿಶ್ವ ಕೂಟದಲ್ಲಿ ಫೈನಲ್ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಚಾಂಪಿಯನ್'ಶಿಪ್'ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಜಾವೆಲಿನ್ ಪಟು ಎಂಬ ಹೆಗ್ಗಳಿಕೆಗೆ ದವೀಂದರ್ ಪಾತ್ರರಾಗಿದ್ದಾರೆ. ಆದರೆ ಮತ್ತೋರ್ವ ಯುವ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ನಿರಾಸೆ ಅನುಭವಿಸಿದ್ದಾರೆ.

ಗುರುವಾರ ನಡೆದ ಅರ್ಹತಾ ಸುತ್ತಿನಲ್ಲಿ ನೀರಜ್ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಆದರೆ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ನಾನು ಸಫಲನಾದೆ. ದೇಶಕ್ಕಾಗಿ ಏನನ್ನಾದರೂ ಮಾಡುವ ಸದಾವಕಾಶ ದೊರೆತಿದೆ. ದೇಶಕ್ಕೆ ಪದಕ ತಂದುಕೊಡುವಂತಹ ಪ್ರದರ್ಶನ ನೀಡುವ ವಿಶ್ವಾಸ ನನ್ನಲ್ಲಿದೆ ಎಂದು ದವೀಂದರ್ ಹೇಳಿದ್ದಾರೆ.

ಇಲ್ಲಿಯವರೆಗಿನ ವಿಶ್ವ ಅ್ಲೇಟಿಕ್ಸ್'ನಲ್ಲಿ ಚಾಂಪಿಯನ್‌ಶಿಪ್‌ನಲ್ಲಿ ಯಾವೊಬ್ಬ ಸ್ಪರ್ಧಿಯೂ ಜಾವೆಲಿನ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಸಫಲನಾಗಿರಲಿಲ್ಲ. ಆದರೆ ಈಗ ದವೀಂದರ್ ಅರ್ಹತೆ ಪಡೆದಿದ್ದಾರೆ.

ಜೂನಿಯರ್ ವಿಶ್ವ ಚಾಂಪಿಯನ್‌'ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದ ನೀರಜ್ ಚೋಪ್ರಾ, ಫೈನಲ್ ಸುತ್ತಿಗೆ ಅರ್ಹತೆ ಪಡೆಯಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ ಭಾರತೀಯರ ಈ ನಂಬಿಕೆಯನ್ನು ದವೀಂದರ್ ಪೂರ್ಣಗೊಳಿಸಿದ್ದಾರೆ. ದವೀಂದರ್ ಅರ್ಹತಾ ಸುತ್ತಿನ 3ನೇ ಮತ್ತು ಕೊನೆಯ ಎಸೆತದಲ್ಲಿ 83 ಮೀ. ದೂರ ಎಸೆಯುವ ಮೂಲಕ ಅರ್ಹತೆ ಗಿಟ್ಟಿಸಿದರು. ಚೋಪ್ರಾ 82.26 ಮೀ. ದೂರ ಎಸೆಯುವಲ್ಲಿ ಮಾತ್ರ ಶಕ್ತರಾದರು.

ನೀರಜ್ ಚೋಪ್ರಾ ಜೂನಿಯರ್ ಚಾಂಪಿಯನ್'ಶಿಪ್'ನಲ್ಲಿ 86.48 ಮೀಟರ್ ದೂರ ಎಸೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಅಲ್ಲದೇ ಪ್ರಸಕ್ತ ಋತುವಿನಲ್ಲಿ ನೀರಜ್ 85.63 ಮೀಟರ್ ದೂರ ಎಸೆದಿದ್ದರು. ವಿಶ್ವ ಅಥ್ಲೇಟಿಕ್ಸ್ ಫೈನಲ್'ಗೇರಲು 83 ಮೀಟರ್ ದೂರ ಎಸೆಯಬೇಕಿತ್ತು. ಆದರೆ ಚೋಪ್ರಾ ಕೇವಲ 82.26 ಮೀಟರ್ ದೂರ ಎಸೆಯಲಷ್ಟೇ ಶಕ್ತರಾದರು.  

 

Follow Us:
Download App:
  • android
  • ios