ಏಕದಿನ ಕ್ರಿಕೆಟ್'ನಲ್ಲಿ ವೈಯಕ್ತಿಕವಾಗಿ ವಾರ್ನರ್ ಬಾರಿಸಿದ 11 ಶತಕ ಇದಾಗಿದೆ. ಈ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ವರ್ಷವೊಂದರಲ್ಲೇ ಬಾರಿಸಿದ್ದ(7) ಶತಕಗಳ ದಾಖಲೆಯನ್ನು ಆಸಿಸ್'ನ ಈ ಎಡಗೈ ಆಟಗಾರ ಸರಿಗಟ್ಟಿದ್ದಾರೆ.

ನವದೆಹಲಿ(ಡಿ.09): ಆಸಿಸ್'ನ ಸ್ಪೋಟಕ ಬ್ಯಾಟ್ಸ್'ಮನ್ ಡೇವಿಡ್ ವಾರ್ನರ್ ಚಾಪೆಲ್-ಹ್ಯಾಡ್ಲಿ ಏಕದಿನ ಟೂರ್ನಿಯಲ್ಲಿ ಸತತ ಎರಡು ಶತಕ ಸಿಡಿಸುವ ಮೂಲಕ ಒಂದೇ ವರ್ಷದಲ್ಲಿ 7 ಶತಕ ಪೂರೈಸಿದ್ದ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮೆಲ್ಬೋರ್ನ್'ನಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ 128 ಎಸೆತ ಎದುರಿಸಿದ ಎಡಗೈ ಆಟಗಾರ 156 ರನ್ ಸಿಡಿಸಿ ಮಿಂಚಿದರು. ಅವರ ಈ ಸ್ಪೋಟಕ ಇನಿಂಗ್ಸ್'ನಲ್ಲಿ 13 ಆಕರ್ಷಕ ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್'ಗಳೂ ಸೇರಿದ್ದವು. ಸತತ ಎರಡು ಶತಕ ಬಾರಿಸಿದ ಆಸ್ಟ್ರೇಲಿಯಾದ ಮೊದಲ ಆಟಗಾರ ಎಂಬ ಶ್ರೇಯಕ್ಕೂ ವಾರ್ನರ್ ಪಾತ್ರರಾಗಿದ್ದಾರೆ.

ಕ್ಯಾನ್'ಬೆರಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿಯೂ ವಾರ್ನರ್ 119 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು.

ಏಕದಿನ ಕ್ರಿಕೆಟ್'ನಲ್ಲಿ ವೈಯಕ್ತಿಕವಾಗಿ ವಾರ್ನರ್ ಬಾರಿಸಿದ 11 ಶತಕ ಇದಾಗಿದೆ. ಈ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ವರ್ಷವೊಂದರಲ್ಲೇ ಬಾರಿಸಿದ್ದ(7) ಶತಕಗಳ ದಾಖಲೆಯನ್ನು ಆಸಿಸ್'ನ ಈ ಎಡಗೈ ಆಟಗಾರ ಸರಿಗಟ್ಟಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 1998ರಲ್ಲಿ ಏಕದಿನ ಕ್ರಿಕೆಟ್'ನಲ್ಲಿ ವರ್ಷವೊಂದರಲ್ಲೇ 9 ಶತಕ ಬಾರಿಸಿರುವುದು ಇಲ್ಲಿವರೆಗಿನ ದಾಖಲೆಯಾಗಿದೆ.