ವಾರ್ನರ್‌ ಐಪಿಎಲ್‌'ನಲ್ಲಿ ನಾಯಕನಾಗಿ 2000 ರನ್‌ ಪೂರೈಸಿದ ಸಾಧನೆಯನ್ನೂ ಮಾಡಿದರು.

ಕಾನ್ಪುರ(ಮೇ.14): ಸನ್‌'ರೈಸ​ರ್ಸ್ ತಂಡದ ನಾಯಕ ಡೇವಿಡ್‌ ವಾರ್ನರ್‌, ಸತತ 2 ಆವೃತ್ತಿಗಳಲ್ಲಿ 600ಕ್ಕೂ ಹೆಚ್ಚು ರನ್‌ ಕಲೆಹಾಕಿದ 2ನೇ ಬ್ಯಾಟ್ಸ್‌ಮನ್‌ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2016ರಲ್ಲಿ ಒಟ್ಟು 848 ರನ್‌ ಗಳಿಸಿದ್ದ ಅವರು, ಶನಿವಾರದ ಪಂದ್ಯದಲ್ಲಿ ಆಮೋಘ ಆಟವಾಡಿ ಈ ಆವೃತ್ತಿಯಲ್ಲೂ 600 ರನ್‌ ಪೂರೈಸಿದರು. ಸದ್ಯ ಅವರು 14 ಪಂದ್ಯಗಳಿಂದ 604 ರನ್‌ ಗಳಿಸಿದ್ದಾರೆ.

ಇದಕ್ಕೂ ಮುನ್ನ ಕ್ರಿಸ್‌ ಗೇಲ್‌ 2011, 2012 ಹಾಗೂ 2013 ಸತತ ಮೂರು ಆವೃತ್ತಿಗಳಲ್ಲಿ ಕ್ರಿಸ್‌ ಗೇಲ್‌ ಈ ಸಾಧನೆ ಮಾಡಿದ್ದರು.

ಇನ್ನು ವಿರಾಟ್‌ ಕೊಹ್ಲಿ 2013 ಹಾಗೂ 2016ರ ಆವೃತ್ತಿಯಲ್ಲಿ 600ಕ್ಕೂ ಹೆಚ್ಚು ರನ್‌ ಕಲೆಹಾಕಿದ್ದರು. ಜತೆಗೆ ವಾರ್ನರ್‌ ಐಪಿಎಲ್‌'ನಲ್ಲಿ ನಾಯಕನಾಗಿ 2000 ರನ್‌ ಪೂರೈಸಿದ ಸಾಧನೆಯನ್ನೂ ಮಾಡಿದರು.