ಚೆನೈ[ಏ.30]: ಚೆನ್ನೈ ಸೂಪರ್’ಕಿಂಗ್ಸ್ ತಂಡದ ಎಂ.ಎಸ್. ಧೋನಿ, ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಮೈದಾನದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಇದರ ನಡುವೆ ಸುರೇಶ್ ರೈನಾ ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ಮಾಡಿದ ಒಂದು ಪೋಸ್ಟ್ ಈಗ ಸಾಕಷ್ಟು ವೈರಲ್ ಆಗುತ್ತಿದೆ.
ಹೌದು, ಇತ್ತೀಚೆಗಷ್ಟೇ ರೈನಾ ಟ್ವಿಟರ್’ನಲ್ಲಿ ತಮ್ಮ ಮಗಳು ಗ್ರೇಶಿಯಾ ಜತೆ ಧೋನಿ ಮಗಳು ಝೀವಾ ಹಾಗೂ ಹರ್ಭಜನ್ ಮಗಳು ಹಿನಾಯ ರೈಮಿಂಗ್ ಹಾಡುತ್ತ ಡ್ಯಾನ್ಸ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಶೇರ್ ಮಾಡಿದ ಒಂದು ದಿನದೊಳಗಾಗಿ ಸುಮಾರು 55 ಸಾವಿರ ಜನ ಲೈಕ್ ಮಾಡಿದ್ದರೆ, ಆರು ಸಾವಿರಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದಾರೆ.

ರೈನಾ, ಧೋನಿ ಹಾಗೂ ಭಜ್ಜಿ ಸಾಕಷ್ಟು ವರ್ಷ ಟೀಂ ಇಂಡಿಯಾ ಪರ ಒಟ್ಟಿಗೆ ಕಾಣಿಸಿಕೊಂಡಿದ್ದರೂ ಐಪಿಎಲ್’ನಲ್ಲಿ ಬೇರೆ ಬೇರೆ ತಂಡದಲ್ಲಿದ್ದರು. ಐಪಿಎಲ್ ಆರಂಭದಿಂದ ರೈನಾ ಹಾಗೂ ಧೋನಿ ಸಿಎಸ್’ಕೆ ತಂಡವನ್ನು ಪ್ರತಿನಿಧಿಸುತ್ತಿದ್ದರೆ, ಭಜ್ಜಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಈ ಮೂವರು ಆಟಗಾರರು ಒಂದೇ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.