ಮಗಳಿಂದ ನಾನು ಪರಿಪೂರ್ಣ ವ್ಯಕ್ತಿಯಾಗಿ ಬದಲಾದೆ: ಎಮ್.ಎಸ್ ಧೋನಿ

First Published 13, Jun 2018, 2:39 PM IST
Daughter changed me as a person: MS Dhoni
Highlights

ದೇಶವೇ ಕೊಂಡಾಡೋ ಕ್ರಿಕೆಟಿಗ ಎಮ್ ಎಸ್ ಧೋನಿ ಪರಿಪೂರ್ಣ ಕ್ರಿಕೆಟಿಗ. ಆದರೆ ಧೋನಿ ಪರಿಪೂರ್ಣ ವ್ಯಕ್ತಿಯಾಗಿದ್ದು ಮಗಳು ಝಿವಾಳಿಂದ. ಹಾಗಾದರೆ ಮಗಳು ಝಿವಾ ಕುರಿತು ಧೋನಿ ಹೇಳಿದ್ದೇನು? ಇಲ್ಲಿದೆ ವಿವಿರ.

ಮುಂಬೈ(ಜೂನ್.13): ಟೀಮ್ಇಂಡಿಯಾ ಅತ್ಯಂತ ಯಶಸ್ವಿ ನಾಯಕ ಎಮ್ ಎಸ್ ಧೋನಿ, ಯುವ ಕ್ರಿಕೆಟಿಗರ ಮಾತ್ರವಲ್ಲ, ಭಾರತೀಯರ ರೋಲ್ ಮಾಡೆಲ್. ಇದೇ ಧೋನಿ ಮಾತ್ರ ತಾನು ಪರಿಪೂರ್ಣ ವ್ಯಕ್ತಿಯಾಗಿ ಬದಲಾಗಿದ್ದು ತನ್ನ ಮಗಳು ಝಿವಾಳಿಂದ ಎಂದಿದ್ದಾರೆ.

ಮುಂಬೈನಲ್ಲಿ ನಡೆದ ಸ್ಟಾರ್ ಸ್ಪೋರ್ಟ್ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಧೋನಿ, ಮಗಳಿಂದಾಗಿ ನನ್ನ ಕ್ರಿಕೆಟ್‌ನಲ್ಲಿ ಅಷ್ಟಾಗಿ ಬದಲಾವಣೆಯಾಗಿಲ್ಲ. ಆದರೆ ತಂದೆಯಾಗಿ, ವ್ಯಕ್ತಿಯಾಗಿ ನಾನು ಸಾಕಷ್ಟು ಬದಲಾಗಿದ್ದೇನೆ. ಝಿವಾ ನನ್ನನ್ನ ಪರಿಪೂರ್ಣ ವ್ಯಕ್ತಿಯನ್ನಾಗಿ ಬದಲಾಯಿಸಿದ್ದಾಳೆ ಎಂದು ಧೋನಿ ಹೇಳಿದ್ದಾರೆ.

ಝಿವಾ ಹುಟ್ಟಿದ ಸಂದರ್ಭ ನಾನು ಕ್ರಿಕೆಟ್‌ನಲ್ಲಿ ಬ್ಯೂಸಿಯಾಗಿದ್ದೆ. ಸತತ ಕ್ರಿಕೆಟ್‌ನಿಂದ ಮಗಳ ಜೊತೆ ಕಾಲಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಕಠಿಣ ಪರಿಸ್ಥಿತಿಯನ್ನ ನಿಭಾಯಿಸೋ ಮೂಲಕ ನಾನು ಸಾಕಷ್ಟು ಕಲಿತಿದ್ದೇನೆ. ಇದೀಗ ಮಗಳೇ ನನ್ನನ್ನ ಸಂಪೂರ್ಣವಾಗಿ ಬದಲಾಯಿಸಿದ್ದಾಳೆ ಎಂದಿದ್ದಾರೆ.
 

loader