‘ಸ್ಮಿತ್‌ಗೆ ಹಳೆಯದನ್ನು ನೆನಪಿಸುವ ಅಗತ್ಯವಿಲ್ಲ. ನಾವು ತಪ್ಪು ಮಾಡುತ್ತೇವೆ. ಆದರೆ ಅದೇ ತಪ್ಪನ್ನೇ ಪದೇ ಪದೆ ಹೇಳುವುದು ಮನಷ್ಯತ್ವ ಅಲ್ಲ. ಅವರ ತಪ್ಪನ್ನು ಕ್ಷಮಿಸಿ, ಮುಂದೆ ಸಾಗಬೇಕಿದೆ. ಒಬ್ಬ ಕ್ರೀಡಾಪಟುವಾಗಿ ನಾವು ಮುಂದಿನ ಪೀಳಿಗೆಯವರಿಗೆ ಆದರ್ಶವಾಗಬೇಕೆಂದು ಯೋಚಿಸುತ್ತೇನೆ’ ಎಂದು ಹೇಳಿದ್ದಾರೆ.

ಕೆನಡಾ(ಜೂ.29]: ಪಬ್‌ವೊಂದರಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಬೀರ್ ಕುಡಿಯುತ್ತಿರುವ ಫೋಟೋ ಹಾಕಿ ಕಾಲೆಳೆದಿರುವ ನ್ಯೂಯಾರ್ಕ್‌ನ ಮಾಧ್ಯಮಗಳಿಗೆ ಬುದ್ಧಿ ಹೇಳಿರುವ ವೆಸ್ಟ್‌ಇಂಡೀಸ್ ತಂಡದ ಕ್ರಿಕೆಟಿಗ ಡ್ಯಾರೆನ್ ಸಮಿ, ಸ್ಟೀವ್ ಸ್ಮಿತ್‌ಗೆ ಬೆಂಬಲ ಸೂಚಿಸಿದ್ದಾರೆ. 

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿರುವ ಅವರು, ‘ಸ್ಮಿತ್‌ಗೆ ಹಳೆಯದನ್ನು ನೆನಪಿಸುವ ಅಗತ್ಯವಿಲ್ಲ. ನಾವು ತಪ್ಪು ಮಾಡುತ್ತೇವೆ. ಆದರೆ ಅದೇ ತಪ್ಪನ್ನೇ ಪದೇ ಪದೆ ಹೇಳುವುದು ಮನಷ್ಯತ್ವ ಅಲ್ಲ. ಅವರ ತಪ್ಪನ್ನು ಕ್ಷಮಿಸಿ, ಮುಂದೆ ಸಾಗಬೇಕಿದೆ. ಒಬ್ಬ ಕ್ರೀಡಾಪಟುವಾಗಿ ನಾವು ಮುಂದಿನ ಪೀಳಿಗೆಯವರಿಗೆ ಆದರ್ಶವಾಗಬೇಕೆಂದು ಯೋಚಿಸುತ್ತೇನೆ’ ಎಂದು ಹೇಳಿದ್ದಾರೆ.

ಗ್ಲೋಬಲ್ ಟಿ20 ಕೆನಡಾ ಲೀಗ್ ಇಂದಿನಿಂದ ಆರಂಭವಾಗಲಿದ್ದು, ಸಮಿ ನಾಯಕತ್ವದ ಟೊರಾಂಟೊ ನ್ಯಾಷನಲ್ಸ್ ತಂಡದ ಪರವಾಗಿ ಸ್ಮಿತ್ ಕಣಕ್ಕಿಳಿಯಲಿದ್ದಾರೆ. ಚೆಂಡು ವಿರೂಪ ಪ್ರಕರಣದ
ಬಳಿಕ ಇದೇ ಮೊದಲ ಬಾರಿಗೆ ಸ್ಮಿತ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ.